ಡೆನ್‌ಮಾರ್ಕ್‌ನಲ್ಲಿ ಹಕ್ಕಿ ಜ್ವರ ಭೀತಿ

ಡೆನ್‌ಮಾರ್ಕ್, ನ ೧೭- ಕೊರೊನಾ ಸೋಂಕಿನ ನಡುವೆಯೇ ಡೆನ್‌ಮಾರ್ಕ್‌ನಲ್ಲಿ ಹಕ್ಕಿ ಜ್ವರ ಭೀತಿ ಶುರುವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಕೊರೊನಾ ಮಧ್ಯೆ ಹಕ್ಕಿ ಜ್ವರದ ಹರಡುವಿಕೆಯನ್ನು ತಡೆಯುವ ಸಲುವಾಗಿ ಮಧ್ಯ ಜುಟ್‌ಲ್ಯಾಂಡ್‌ನಲ್ಲಿ ಈಗಾಗಲೇ ಸುಮಾರು ೨೫ ಸಾವಿರ ಕೋಳಿಗಳನ್ನು ಕೊಲ್ಲುವಂತೆ ಆದೇಶ ಮಾಡಲಾಯಿತು,’ ಎಂದು ದೇಶದ ಪಶುವೈದ್ಯಕೀಯ ಮತ್ತು ಆಹಾರ ಇಲಾಖೆ ತಿಳಿಸಿದೆ.
’ರಾಂಡರ್ಸ್ ಬಳಿಯ ಟ್ರಸ್ಟ್ರಪ್‌ನಲ್ಲಿರುವ ಕೋಳಿ ಹಿಂಡಿನಲ್ಲಿ ಸಾಂಕ್ರಾಮಿಕ ಹಕ್ಕಿ ಜ್ವರ ಇರುವುದು ’ಸ್ಟೇಟನ್ಸ್ ಸೀರಮ್ ಇನ್‌ಸ್ಟಿಟ್ಯೂಟ್ನ ಅಧ್ಯಯನದಲ್ಲಿ ಪತ್ತೆ ಯಾಗಿದೆ. ಹಕ್ಕಿ ಜ್ವರ ಕಾಯಿಲೆಯು ಕೋಳಿಗಳಲ್ಲಿ ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ’ ಎಂದು ಇಲಾಖೆ ತಿಳಿಸಿದೆ.
’ಸೋಂಕಿತ ಕೋಳಿಗಳನ್ನು ಕೊಲ್ಲಲಾಗಿದೆ. ಸೋಂಕು ಪತ್ತೆಯಾಗಿರುವ ಸ್ಥಳದಲ್ಲಿ ಎರಡು ನಿರ್ಬಂಧಿತ ಪ್ರದೇಶಗಳನ್ನು ರಚಿಸಲಾಗಿದೆ. ಇಲ್ಲಿ ಪಕ್ಷಿಗಳು, ಕೋಳಿಗಳು ಮತ್ತು ಅದರ ಉತ್ಪನ್ನಗಳ ಮೇಲ್ವಿಚಾರಣೆ ನಡೆಯಲಿದೆ,’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ತಿಂಗಳ ಆರಂಭದಲ್ಲಿ, ಡೆನ್‌ಮಾರ್ಕ್‌ನ ಜುಟ್‌ಲ್ಯಾಂಡ್ ಪ್ರದೇಶದ ಕಾಡು ಪಕ್ಷಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಸದ್ಯ ಅದು ಸಾಂಕ್ರಾಮಿಕಗೊಳ್ಳುತ್ತಿದೆ.
ಜರ್ಮನಿ ಮತ್ತು ಫ್ರಾನ್ಸ್ ಸೇರಿದಂತೆ ಯುರೋಪಿನ ವಿವಿಧ ಭಾಗಗಳಲ್ಲಿಯೂ ಅದು ಹರಡುತ್ತಿದೆ.