ಡೆತ್ ನೋಟ್ ಬರೆದಿಟ್ಟು ನದಿಗೆ ಜಿಗಿದು ಶಿಕ್ಷಕ ಆತ್ಮಹತ್ಯೆ

ವಿಜಯಪುರ,ನ.24-ಡೆತ್ ನೋಟ್ ಬರೆದಿಟ್ಟು, ಶಿಕ್ಷಕರೊಬ್ಬರು ಕೃಷ್ಣಾ ನದಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ಜಿಲ್ಲೆಯ ಕೊಲ್ಹಾರ ಪಟ್ಟಣದ ಕೊಲ್ಹಾರ ಸೇತುವೆ ಬಳಿ ನಡೆದಿದೆ.
ಬೆಲ್ಲದ ಹಳ್ಳದ ಎಲ್ಪಿಎಸ್ ಶಾಲೆಯ ಶಿಕ್ಷಕ 52 ವರ್ಷದ ಬಾಳಪ್ಪ ದಳವಾಯಿ ಆತ್ಮಹತ್ಯೆಗೆ ಶರಣಾದವರು. ಇವರು ಸೋಮವಾರ ರಾತ್ರಿ ಮನೆಯಿಂದ ಹೋದವರು ಮರಳಿ ಬಂದಿಲ್ಲ. ಇಲ್ಲಿನ ಕೃಷ್ಣಾ ನದಿಯ ಸೇತುವೆಯ ಪಕ್ಕದಲ್ಲಿ ಬೈಕ್ ನಿಲ್ಲಿಸಿ, ಚಪ್ಪಲಿಗಳನ್ನು ಬಿಟ್ಟು, ಡೆತ್ ನೋಟ್ ಬರೆದಿಟ್ಟು ನದಿಗೆ ಜಿಗಿದಿದ್ದಾರೆ. ಅಲ್ಲದೇ, ನನ್ನ ಸಾವಿವೆ ಯಾರೂ ಹೊಣೆ ಅಲ್ಲ. ನಾನೇ ಕಾರಣ ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಇಂಜಿನ್ ಬೋಟ್ ಮೂಲಕ ಶೋಧ ಕಾರ್ಯ ನಡೆಸಿದ್ದು, ಕೊಲ್ಹಾರ ಪೆÇಲೀಸರು ಹಾಗೂ ಸಿಬ್ಬಂದಿ ಸ್ಥಳದಲ್ಲಿದ್ದಾರೆ.