ಡೆಂಟಲ್ ಕಾಲೇಜಿನಲ್ಲಿ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪ್ಲಾಂಟ್ ಗೆ ಚಾಲನೆ

ಬಳ್ಳಾರಿ, ಮೇ 29: ನಗರದ ವಿಮ್ಸ್ ಬಳಿಯ‌ ನ್ಯೂ ಡೆಂಟಲ್ ಕಾಲೇಜು ಕೋವಿಡ್ ಆಸ್ಪತ್ರೆಯ ಬಳಿ 6ಕೆಎಲ್ ಸಾಮರ್ಥ್ಯದ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪ್ಲಾಂಟ್ ನ್ನುಬಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಇಂದು ಮಧ್ಯಾಹ್ನ ಉದ್ಘಾಟಿಸಿದರು.
ಈ ಮೊದಲು ಹೊಸ ಡೆಂಟಲ್ ಕೋವಿಡ್ ಆಸ್ಪತ್ರೆಯಲ್ಲಿ ಡ್ಯೂರಾ ಸಿಲಿಂಡರ್ ಮೂಲಕ 40 ಆಕ್ಸಿಜನ್ ಬೆಡ್ ಗಳ ನಿರ್ವಹಣೆ ಮಾಡಲಾಗುತ್ತಿತ್ತು. ಈ ಘಟಕ ಅಳವಡಿಕೆಯಿಂದ 180 ಆಕ್ಸಿಜನ್ ಬೆಡ್ ಗಳಿಗೆ ನಿರಂತರ ಆಕ್ಸಿಜನ್ ಪೂರೈಕೆಗೆ ಅನುಕೂಲವಾಗಲಿದೆ.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಮೊದಲಾದವರು ಇದ್ದರು.