ಡೆಂಟಲ್ ಆಸ್ಪತ್ರೆಯಲ್ಲಿ ವಿದ್ಯುತ್ ಶಾಕ್ ಸರ್ಕಿಟ್

ಮಾನ್ವಿ,ಮಾ.೦೭- ಪಟ್ಟಣದ ಬಸವ ವೃತ್ತದಲ್ಲಿರುವ ಸಾಯಿ ಪವನ್ ಹಲ್ಲಿನ ಆಸ್ಪತ್ರೆಯಲ್ಲಿ ವಿದ್ಯುತ್ ಶಾಕ್ ಸರ್ಕಿಟ್ ಆಗಿ ಸಣ್ಣ ಪ್ರಮಾಣ ಹಾನಿಯಾಗಿದ್ದು ಯಾವುದೇ ಪ್ರಣಾಪಾಯವಾಗಿಲ್ಲ ಕೂಡಲೇ ಆಗ್ನಿ ಶಾಮಕ ವಾಹನ ಸ್ಥಳಕ್ಕೆ ಆಗಮಿತಾದರೂ ಅಷ್ಟೋತಿಗಾಗಲೆ ಸ್ಥಳೀಯರು ಬೆಂಕಿಯನ್ನು ನಂದಿಸಿದರು.
ಪಟ್ಟಣದ ಪ್ರಮುಖ ಸ್ಥಳವಾಗಿರು ಕಾರಣದಿಂದಾಗಿ ಜನರು ಜಮಾವಣೆಯಾಗಿದ್ದರಿಂದ ಕೆಲಕಾಲ ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿದ್ದ ಬಿಟ್ಟರೆ ಯಾವುದೆ ಹಾನಿಯಾಗಿಲ್ಲ.
ಇತ್ತೀಚಿನ ದಿನಗಳಲ್ಲಿ ಪಟ್ಟಣದ ಅನೇಕ ಭಾಗದಲ್ಲಿ ದಾವಖಾನೆಗಳ ಸಂಖ್ಯೆ ಅಧಿಕವಾಗಿದ್ದು ಖುಷಿಯಾದ ವಿಚಾರ ಆದರೆ ಅನೇಕ ಆಸ್ಪತ್ರೆಯಲ್ಲಿ ಯಾವುದೇ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳದೆ ಸಾರ್ವಜನಿಕರ ಜೊತೆ ಆಟವಾಟುವ ಆಸ್ಪತ್ರೆಯ ವಿರುದ್ಧ ತಾಲೂಕ ಆರೋಗ್ಯ ಇಲಾಖೆ ಕ್ರಮಕೈಗೊಳ್ಳಬೇಕಾಗಿದೆ ಎಂದು ಜನರು ಮಾತಾನಾಡಿಕೊಳ್ಳುತ್ತಿದ್ದಾರೆ.