ಡೆಂಗ್ಯೂ ಹರಡದಂತೆ ಮನೆ ಸುತ್ತ ಸ್ವಚ್ಛತೆ ಕಾಪಾಡಿ – ಸಂಧ್ಯಾ

ಡೆಂಗ್ಯೂ ಜ್ವರ ವಿರೋಧಿ ಮಾಸಾಚರಣೆ
ರಾಯಚೂರು,ಜು.೨೩- ಯಾವುದೆ ಜ್ವರ ಇರಲಿ ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮನೆಯ ಹೊರಗಡೆ ಮತ್ತು ಮನೆಯ ಒಳಗಡೆ ನೀರಿನಲ್ಲಿ ಬಾಲ ಹುಳಗಳು ಯಾಗದಂತೆ ನೋಡಿಕೊಳ್ಳಬೇಕು ಎಂದು ಮಲೇರಿಯಾ ತಾಂತ್ರಿಕ ಮೇಲ್ವಿಚಾರಕಿ ಸಂಧ್ಯಾ ಹೇಳಿದರು.
ಅವರಿಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ಜಹೀರಬಾದ, ಸಿಯಾತಲಾಬ್ ಹಾಗೂ ಹರಿಜನವಾಡ ಸಂಸ್ಥೆಯ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ ಡೆಂಗೀ ವಿರೋಧಿ ಮಾಸಾಚರಣೆ ಆಚರಿಸಿ ಮಾತನಾಡಿದ ಅವರು,ಡೆಂಗೀ ಜ್ವರ ನಿಂತ ನೀರು ಸೊಳ್ಳೆಗಳ ಉತ್ಪತ್ತಿ ತಾಣ ಇದನ್ನು ನಾವು ಮುಂಜಾಗ್ರತವಾಗಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು.ಬಾಲ ಹುಳುಗಳು ಒಂದು ವಾರದಲ್ಲಿ ಸೊಳ್ಳೆಯಾಗಿ ಹೊರ ಬರುತ್ತದೆ ಈ ಸೊಳ್ಳೆ ಹಗಲು ಹೊತ್ತಿನಲ್ಲಿ ಕಚ್ಚುವದರಿಂದ ಡೆಂಗಿ ಜ್ವರ ಬರುತ್ತದೆ. ಆದುದರಿಂದ,ಮುಂಜಾಗ್ರತ ಕ್ರಮ ವಹಿಸಿಕೊಳ್ಳಬೇಕು ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಂಗರಾವ್ ಕುಲಕರ್ಣಿ ಐಕೂರ ಮಾತನಾಡಿ,
ಡೆಂಗೀ ಜ್ವರದ ಲಕ್ಷಣಗಳು ವಿಪರೀತ ಜ್ವರ, ತಲೆನೋವು,ಕಣ್ಣಿನ ಹಿಂಭಾಗದಲ್ಲಿ ನೋವು, ಮೈ,ಕೈ ನೋವು ವಿಪರೀತ ಸುಸ್ತು,ಚರ್ಮದ ಮೇಲೆ ಗುಳ್ಳೆಗಳು ವಸಡು ಮತ್ತು ಮೂಗಿನಿಂದ ರಕ್ತ ಸೋರುವಿಕೆ ಈ ರೀತಿಯಾಗಿ ಲಕ್ಷಣಗಳು ಕಂಡುಬರುತ್ತವೆ ಇದನ್ನು ತಕ್ಷಣವೇ ವೈದ್ಯರ ಹತ್ತೀರ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜ ಮಾತನಾಡಿ,ಮನೆ ಮನೆಗೆ ನಮ್ಮ ಇಲಾಖೆಯವರು ಭೇಟಿ ನೀಡಿದಾಗ ಅವರಿಗೆ ಸಹಕಾರ ನೀಡಬೇಕು.ಕಾರಣ ಸಾರ್ವಜನಿಕರಿಗೆ ಸಾಂಕ್ರಮಿಕ ರೋಗಗಳ ಕುರಿತು ಆರೋಗ್ಯ ಶಿಕ್ಷಣ ನೀಡುತ್ತಾರೆ ದಯವಿಟ್ಟು ಇದಕ್ಕೆ ಸಹಕಾರ ನೀಡಬೇಕು ಎಂದರು.
ಇದೆ ವೇಳೆ ಡೆಂಗೀ ಜ್ವರದ ಬಗ್ಗೆ ಸಾರ್ವಜನಿಕರಿಗೆ ಡೆಂಗೀ ಜ್ವರ ಹೇಗೆ ಹರಡುತ್ತದೆ ಅದನ್ನು ನಾವು ಯಾವ ರೀತಿಯಾಗಿ ಮುಂಜಾಗ್ರತ ಕ್ರಮ ವಹಿಸಿಕೊಳ್ಳಬೇಕು ಎಂಬುವದರ ಕುರಿತು ಶಾಲೆಯ ವಿದ್ಯಾರ್ಥಿಗಳಿಂದ ಜಾಥ ಕಾರ್ಯಕ್ರಮ ಮಾಡಲಾಯಿತು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಮಸ್ತ ಸಿಬ್ಬಂದಿ ವರ್ಗ, ಶಾಲೆಯ ಶಿಕ್ಷಕರು ಹಾಗು ಆಶಾ ಕಾರ್ಯಕರ್ತೆಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.