ಡೆಂಗ್ಯೂ ರಥಕ್ಕೆ ಚಾಲನೆ

ಬೀದರ:ಸೆ.19: ನೆಹರು ಕ್ರೀಡಾಂಗಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಆಚರಣೆಯಲ್ಲಿ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಕಾರ್ಯಕ್ರಮದ ವತಿಯಿಂದ ಬೀದರ ಜಿಲ್ಲಾಯಾದಂತ ಜನರಲ್ಲಿ ಡೆಂಗ್ಯೂ/ಚಿಕುನಗುನ್ಯಾ ರೋಗಗಳ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಡೆಂಗ್ಯೂ ರಥ ಚಾಲನೆಯನ್ನು ಶ್ರೀ ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಅರಣ್ಯ ಮತ್ತು ಪರಿಸರ ಖಾತೆ ಮತ್ತು ಮಾನ್ಯ ಶ್ರೀ ರಹೀಮ ಖಾನ ಪೌರಾಡಳಿತ ಸಚಿವರು ಕರ್ನಾಟಕ ಸರಕಾರ ಹಸಿರು ದ್ವಜ ತೂರಿಸುವ ಮುಖಾಂತರ ಚಾಲನೆ ನೀಡಿದರು.
ಗೋವಿಂದ ರೆಡ್ಡಿ ಜಿಲ್ಲಾಧಿಕಾರಿ ಗಳು, ಶ್ರೀಮತಿ ಶಿಲ್ಪಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಡಾ. ಜ್ಞಾನೇಶ್ವರ ನೀರಗುಡೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಡಾ.ರಾಜಶೇಖರ ಪಾಟೀಲ್ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಕಾರ್ಯಕ್ರಮ ಅಧಿಕಾರಿಗಳು , ಮಾದ್ಯಮ ಮಿತ್ರರೂ ಹಾಗೂ ಆರೋಗ್ಯ ಇಲಾಖೆಯ ತಾಂತ್ರಿಕ ಅಧಿಕಾರಿಗಳು ಉಪಸ್ಥಿತ ರಿದ್ದರು