ಡೆಂಗ್ಯೂ ನಿರ್ಮೂಲನ ದಿನಾಚರಣೆ


ಲಕ್ಷ್ಮೇಶ್ವರ,ಮೇ.18: ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ದಿನಾಂಕ 16 ರಂದು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸೂಚನೆಯಂತೆ ಡೆಂಗ್ಯು ನಿರ್ಮೂಲನ ದಿನಾಚರಣೆ ಯಾಗಿ ಆಚರಿಸಲಾಯಿತು.
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಗಿರೀಶ್ ಕಳಸಣ್ಣವರ ಮಾತನಾಡಿ ಈಗ ಮಳೆಗಾಲ ಆರಂಭವಾಗ ತೊಡಗಿದ್ದು ಸಾರ್ವಜನಿಕರು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಮತ್ತು ಟ್ಯಾಂಕುಗಳಲ್ಲಿ ಮತ್ತು ಟಾಯರುಗಳಲ್ಲಿ ನೀರು ಸಂಗ್ರಹ ಮಾಡಿ ಬಹಳ ದಿನಗಳವರೆಗೆ ಬಿಟ್ಟರೆ ಅದರಲ್ಲಿ ಲಾರ್ವ ಹುಟ್ಟಿ ಡೆಂಗ್ಯೂ ಮಲೇರಿಯ ಮತ್ತು ಚಿಕನ್ ಗುನ್ಯ ರೋಗಗಳು ಕಾಣಿಸಿಕೊಳ್ಳುತ್ತಿವೆ ಆದ್ದರಿಂದ ಸಾರ್ವಜನಿಕರು ಶುಚಿತ್ವದ ಕಡೆಗೆ ಗಮನಕೊಡಬೇಕು ರೋಗದ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಬೇಕು.
ಜ್ವರ ಕೆಮ್ಮು ನೆಗಡಿ ಮತ್ತು ಮೊಣಕಾಲು ಮೊಣಕೈ ನೋವು ಕಾಣಿಸಿಕೊಂಡ ಕೂಡಲೇ ನಿರ್ಲಕ್ಷ್ಯ ಮಾಡದೆ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಹಿರಿಯರು ನಾಗರಿಕರು ಇದ್ದರು.