
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.19: ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಆರೋಗ್ಯ ಅಧಿಕಾರಿಗಳಿಗೆ ಆಶಾ ಕಾರ್ಯಕರ್ತೆಯರಿಗೆ ಮತ್ತು ನಾಗರಿಕರಿಗೆ ಡೆಂಗ್ಯೂ ಜ್ವರ, ಚಿಕನ್ ಗುನ್ಯಾ ಜ್ವರ ಹರಡುವ ಸೊಳ್ಳೆಯಾದ ಈಡಿಸ್ ಈಜಿಪ್ಟೈ ಕುರಿತು ಬೀದಿಗಳಲ್ಲಿ ಜಾಗೃತಿ ಜಾಥಾ ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಸೊಳ್ಳೆ ಕಪ್ಪು ಮತ್ತು ಬಿಳಿ ಪಟ್ಟಿಗಳನ್ನು ಹೊಂದಿದ್ದು ಹಗಲಿನ ವೇಳೆ ಹೆಚ್ಚು ಕ್ರಿಯಾಶೀಲವಾಗಿರುತ್ತದೆ. 20 ರಿಂದ 30 ದಿನಗಳ ಜೀವಿತಾವಧಿಯನ್ನು ಹೊಂದಿದ್ದು ಸ್ವಚ್ಛವಾದ ನೀರಿನಲ್ಲಿ, ನಿಂತ ನೀರಿನ ತಾಣಗಳಲ್ಲಿ ವಾರಕ್ಕೆ 100 ರಿಂದ 200 ಮೊಟ್ಟೆಗಳನ್ನಿಡುತ್ತದೆ. ಸಂತಾನೋತ್ಪತ್ತಿಗಾಗಿ ಮಾನವನ ರಕ್ತವನ್ನು ಅವಲಂಬಿಸಿದೆ. ಡೆಂಗ್ಯೂ ಜ್ವರದ ವಿಧಗಳಾದ ಸಾಮಾನ್ಯ ಜ್ವರ, ರಕ್ತಸ್ರಾವ ಜ್ವರ ಮತ್ತು ಶಾಕ್ ಸಿಂಡ್ರೋಮ್ ಆಗಿದೆ. ಸಾಮಾನ್ಯ ಜ್ವರದ ಲಕ್ಷಣಗಳಲ್ಲಿ ಜ್ವರದ ತಾಪಮಾನ ತೀವ್ರವಾಗಿದ್ದು ಬಿಳಿ ರಕ್ತ ಕಣಗಳ ಸಂಖ್ಯೆ ಇಳಿಮುಖವಾಗಿ ಮಗು ನಿತ್ರಾಣಗೊಳ್ಳುತ್ತದೆ. ಈ ಸಂದರ್ಭದಲ್ಲಿ ನಿರ್ಲಕ್ಷ್ಯ ಧೋರಣೆ ತೋರಿದಲ್ಲಿ ಎರಡನೇ ಸ್ಟೇಜಿಗೆ ಅಂದರೆ ರಕ್ತಸ್ರಾವ ಜ್ವರಕ್ಕೆ ಹೋಗುತ್ತದೆ. ಮೈಮೇಲೆ ಗಂಧೆಗಳು ಕಾಣಿಸಿಕೊಂಡು ವಸಡುಗಳಲ್ಲಿ ಕಣ್ಣುಗಳಲ್ಲಿ ಮತ್ತು ಮೂಗಿನಲ್ಲಿ ರಕ್ತ ಬರಲಾರಂಭಿಸುತ್ತದೆ. ಬಿಳಿ ರಕ್ತ ಕಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿ ಮಗು ಸಂಪೂರ್ಣ ನಿಶಕ್ತನಾಗಿತ್ತನೆ ಇದಕ್ಕೆ ಪರ್ಯಾಯವಾಗಿ ರಕ್ತ ನೀಡಿದರು ಪ್ಲೇಟ್ಲೆಟ್ ಗಳ ಸಂಖ್ಯೆ ಹೆಚ್ಚಾಗಬಹುದು ಕಡಿಮೆಯೂ ಆಗಬಹುದು ಒಂದು ವೇಳೆ ಬಿಳಿ ರಕ್ತ ಕಣಗಳ ಸಂಖ್ಯೆ ಕಡಿಮೆಯಾದಲ್ಲಿ ಮಗು ಮೂರ್ಛೆ ಸ್ಥಿತಿಗೆ ಅಂದರೆ ಶಾಕ್ ಸಿಂಡ್ರೋಮ್ ಗೆ ತಲುಪುತ್ತದೆ.
ಇಂತಹ ಮಾರಕ ಸೊಳ್ಳೆಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯು ಪ್ರತಿ ತಿಂಗಳಲ್ಲಿ ಪಾಕ್ಷಿಕವಾಗಿ ಲಾರ್ವ ತಾಣಗಳ ಸಮೀಕ್ಷೆ ನಡೆಸುತ್ತದೆ. ಲಾರ್ವ ಕಂಡು ಬಂದ ಕೂಡಲೇ ಖಾಲಿ ಮಾಡಿಸಿ ಆರೋಗ್ಯ ಶಿಕ್ಷಣ ನೀಡಲಾಗುತ್ತದೆ ಹಾಗೂ ರಕ್ಷಣಾತ್ಮಕವಾಗಿ ಜನರು ಸೊಳ್ಳೆ ಪರದೆ ಬಳಸುವುದು ಮನೆಯ ಕಿಟಕಿಗಳಿಗೆ ಜಾಲಂದ್ರ ಹಾಕಿಸುವುದು ಸೊಳ್ಳೆ ಬತ್ತಿ ಲಿಕ್ವಿಡ್ ಮತ್ತು ಬೇವಿನ ಹೊಗೆ ಹಾಕುವುದರಿಂದ ಸೊಳ್ಳೆಗಳ ಕಚ್ಚುವಿಕೆಯಿಂದ ಉಳಿಯಬಹುದು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಮಹಮದ್ ಖಾಸಿಂರವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಟಿ.ಹೆಚ್.ಓ ಡಾಕ್ಟರ್ ಈರಣ್ಣ ರವರು ಪ್ರಾಮಾಣಿಕವಾದ ಸಮೀಕ್ಷೆ ಮತ್ತು ಆರೋಗ್ಯ ಶಿಕ್ಷಣ ನೀಡಿದಲ್ಲಿ ಡೆಂಗ್ಯೂ ಜ್ವರವನ್ನು ಸಮಾಜದಿಂದ ಕೊನೆಗಾಣಿಸಬಹುದು ಎಂದು ತಿಳಿಸಿದರು.
ನಗರ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾಕ್ಟರ್ ಮಹಾಲಕ್ಷ್ಮಿ , ಮಟ್ಟೂರು ಬಸವರಾಜ್, ಆರೋಗ್ಯ ನಿರಕ್ಷಣಾಧಿಕಾರಿ ಚಂದ್ರಶೇಖರ್, ಪವನ್ ಕುಮಾರ್, ವಿಜಯ್ ಕುಮಾರ್, ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಶಶಿಕಲಾ, ಶೋಭಾ ಜಯಂತಿ ಮಾಲಾ ಅಳ್ಳಮ್ಮ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ನಾಗರಿಕರು ಹಾಜರಿದ್ದರು.
One attachment • Scanned by Gmail