ಡೆಂಗ್ಯೂ ನಿಯಂತ್ರಣದ ಲಾರ್ವಾ ಸಮೀಕ್ಷೆ

ಸಿಂಧನೂರು,ಜೂ.೦೩-
ಮಳೆ ಗಾಲದಲ್ಲಿ ಜನರಿಗೆ ಡೆಂಗ್ಯು, ಚಿಕುಂಗುನ್ಯಾ ಜ್ವರ ಬಾರದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಆರೋಗ್ಯ ಇಲಾಖೆಯ ವತಿಯಿಂದ ನಗರ ಹಾಗೂ ತಾಲ್ಲೂಕಿನಲ್ಲಿ ಡೆಂಗ್ಯೂ ನಿಯಂತ್ರಣದ ಲಾರ್ವಾ (ಸೊಳ್ಳೆ ಮರಿ) ಸಮೀಕ್ಷೆ ಮಾಡುವ ಮೂಲಕ ಮನೆ ಮನೆ ಭೇಟಿ ಮಾಡಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು ಎಂದು ತಾಲುಕಾ ಮೇಲ್ವಿಚಾರಕರಾದ ಎಫ್.ಎ ಹಣಗಿ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟಂಬ ಇಲಾಖೆ, ಜಿಲ್ಲಾ ಮಲೇರಿಯಾ ಅಧಿಕಾರಿಗಳ ಕಛೇರಿಯವರ ಮೇಲ್ವಿಚಾರಣೆಯಲ್ಲಿ ಮಳೆಗಾಲದಲ್ಲಿ ಕೈಗೊಳ್ಳುವ ಈಡಿಸ್ ಇಜಿಪ್ಟೆ ಜಾತಿಯ ಸೊಳ್ಳೆಗಳ ಹಾವಳಿ ನಿಯಂತ್ರಣ ಕಾರ್ಯ ನಡೆಸಲಾಯಿತು ಸ್ವಚ್ಛವಾದ ನೀರಿನಲ್ಲಿ ಹುಟ್ಟುವ ಡೆಂಗ್ಯೂ ಜ್ವರದ ಸೊಳ್ಳೆಗಳು ಪರಿಸರ ಸ್ವಚ್ಛತೆ ಇದ್ದರೆ ಯಾರಿಗೂ ಡೆಂಗ್ಯೂ ಜ್ವರ ಬರುವುದಿಲ್ಲ ತಾಲೂಕಿನಿಂದ ಪ್ರತಿ ಶುಕ್ರವಾರ ನಗರದಲ್ಲಿ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಸತತವಾಗಿ ಹಮ್ಮಿಕೊಳ್ಳಲಾಗಿದೆ ಎಂದರು.
ಮಳೆಗಾಲದಲ್ಲಿ ಈಡೀಸ ಈಜಿಪ್ಟ ಜಾತಿಯ ಸೊಳ್ಳೆಯ ಮರಿಯಾದ ಲಾರ್ವಾ ಸಮೀಕ್ಷೆಯನ್ನು ಆರೋಗ್ಯ ಇಲಾಖೆಯಿಂದ ಮಾಡಲಾಗುತ್ತಿದ್ದು, ಆರೋಗ್ಯ ಇಲಾಖೆಯ ಜೊತೆಗೆ ಸಾರ್ವಜನಿಕರು ಸಹಕಾರ ನೀಡಿ ಕೈಜೋಡಿಸಿದಾಗ ಮಾತ್ರ ಡೆಂಗ್ಯು ಜ್ವರ ಬಾರದಂತೆ ತಡೆಗಟ್ಟುಲು ಸಾಧ್ಯ ಎಂದರು.
ನಗರದ ಅಂಬೇಡ್ಕರ ನಗರ, ಎಂ,ಬಿ ಕಾಲೋನಿ ೨೩ ವಾರ್ಡ್, ಕೊಡದ ಫಾಕ್ಟರಿ, ಧನಗರ ಓಣಿ, ಕಂಕೇರ ಓಣಿ, ಪ್ರಶಾಂತ ನಗರ, ಗಂಗಾನಗರ, ಸೇರಿದಂತೆ ಇತರ ವಾರ್ಡ್‌ಗಳಲ್ಲಿ ಮನೆಮನೆಗೆ ಬೇಟಿ ನೀಡಿ ಸಮೀಕ್ಷೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು ಈಗಾಗಲೆ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯ ಕ್ರಮ ಮಾಡಿ ಜನರಿಗೆ ತಿಳುವಳಿಕೆ ನೀಡಲಿಗುತ್ತಿದೆ ಎಂದರು.
ಸೊಳ್ಳೆ ಬತ್ತಿ, ಸೊಳ್ಳೆ ಪರದಿ ಬಳಸಬೇಕು ವಿಶೇಷವಾಗಿ ನಗರದಲ್ಲಿ ಬಳಸುವ ಸಿಮೆಂಟ್ ತೊಟ್ಟಿಯ ನೀರು ತುಂಬುವ ಪರಿಕರಗಳನ್ನು ವಾರದಲ್ಲಿ ೨ ಸಲ ಸ್ವಚ್ಛವಾಗಿ ತೊಳೆದು ಸೊಳ್ಳೆಗಳು ಮರಿ ಹಾಕದಂತೆ ಮುಚ್ಚಿಡಬೇಕು ಅಥವಾ ಮುಚ್ಚಲು ಹಳೆಯ ಬಟ್ಟೆಗಳನ್ನು ಬಳಸಬೇಕು ಹೊರಾಂಗಣದಲ್ಲಿ ಇರುವ ಟೆಂಗಿನ ಚಿಪ್ಪು, ಒಡೆದ ಬಾಟಲ್‌ಗಳು, ಬಳಕೆಗೆ ಬಾರದ ಪ್ಲಾಸ್ಟಿಕ್ ವಸ್ತುಗಳನ್ನು ಮನೆಯಲ್ಲಿ ಶೇಖರಿಸಿ ಇಡದೆ ಕಸದ ತೊಟ್ಟಿಗೆ ಹಾಕಿ ನೀರು ನಿಲ್ಲದಂತೆ ನೋಡಿ ಕೊಳ್ಳಬೇಕು ಇದರಿಂದ ಯಾವುದೆ ರೋಗ ರುಜಿನಗಳು ಬರುವುದಿಲ್ಲ. ಒಂದು ವೇಳೆ ಜ್ವರ ಬಂದರೆ ತಕ್ಷಣ ರಕ್ತಪರೀಕ್ಷೆ ಮಾಡಿಸಲು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಿ ವೈದ್ಯರ ಹತ್ತಿರ ತೋರಿಸಿಕೊಳ್ಳಬೇಕು ಎಂದು ಬಳಗಾನೂರು ಸರ್ಕಾರಿ ಆಸ್ಪತ್ರೆಯ ಆರೋಗ್ಯ ನಿರೀಕ್ಷಕರಾದ ಪ್ರಕಾಶ ಜನರಲ್ಲಿರ ಮನವಿ ಮಾಡಿಕೊಂಡರು.
ಆಶಾ ಕಾರ್ಯಕರ್ತೆಯಾದ ರೇಣುಕಾ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಲಾರ್ವಾ ಸರ್ವೆ ಕಾರ್ಯಕ್ರಮದಲ್ಲಿ ಭಾಗಿಯಾದ ಸಿಬ್ಬಂದಿಗಳು ಹಾಜರಿದ್ದರು.