ಸಂಜೆವಾಣಿ ವಾರ್ತೆ
ಗಂಗಾವತಿ, ಸೆ.27: ಡೆಂಗ್ಯೂ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ ಇಲಾಖೆಯಿಂದಲೂ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಆರೋಗ್ಯ ಸಹಾಯಕರಾದ ವಿಜಯ ಪ್ರಸಾದ್ ಹೇಳಿದರು.
ನಗರದಲ್ಲಿ ಡೆಂಗ್ಯೂ ಜಾಗೃತ ರಥ ಯಾತ್ರೆಗೆ ಚಾಲನೆ ನೀಡಿ ಮಾತನಾಡಿ ರಾಜ್ಯ ಸರ್ಕಾರದ ನಿರ್ದೇಶನದಂತೆ ಗಂಗಾವತಿ ನಗರದಲ್ಲಿ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಸಂಯೋಗದೊಂದಿಗೆ ಡೆಂಗ್ಯೂ ನಿಯಂತ್ರಣ ಕುರಿತು ಡೆಂಗ್ಯೂ ರಥದ ಮೂಲಕ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಜ್ವರಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲಾ ರೋಗ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುವುದು. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಮುಂಜಾಗ್ರತ ಕ್ರಮಗಳಾದ ನಿಂತ ನೀರು ಸೊಳ್ಳೆಯ ತವರು ಇದ್ದಂತೆ, ಆದ್ದರಿಂದ ಎಲ್ಲಾ ಬಗೆಯ ನೀರಿನ ತೊಟ್ಟಿ ಡ್ರಮ್ ಬ್ಯಾರೆಲ್ ಏರ್ ಕೊಲರ್ ಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಮತ್ತು ಸ್ವಚ್ಚಗೊಳಸಿ ಒಣಗಿಸಿ ಪುನಃ ನೀರು ತುಂಬಿ ಸೊಳ್ಳೆಗಳು ನುಸಳದಂತೆ ಮುಚ್ಚಳಿಕೆಯಿಂದ ಭದ್ರವಾಗಿ ಮುಚ್ಚಬೇಕು ಹಾಗೂ ಮನೆಯ ಒಳಗೆ ಮತ್ತು ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ ಸೊಳ್ಳೆ ಉತ್ಪತ್ತಿಯನ್ನು ತಡೆಗಟ್ಡಿ ಮಲಗುವಾಗ ಸೊಳ್ಳೆ ಪರದೆಯನ್ನು ಉಪಯೋಗಿಸಿ ಎಂದು ಸಾರ್ವಜನಿಕರಿಗೆ ಸಲಹೆಯನ್ನು ನೀಡಿದರು
ಈ ಸಂದರ್ಭದಲ್ಲಿ ಆರೋಗ್ಯ ಹಿರಿಯ ಸಹಾಯಕ ಭೀಮಣ್ಣ, ಮಲೇರಿಯಾ ಮೇಲ್ವಿಚಾರಕ ದೇವೇಂದ್ರಗೌಡ, ಡಾ.ಶಬ್ರೀನ್,ಡಾ.ರಮೇಶ, ಮಲೇರಿಯಾ ಲಿಂಕ್ ವರ್ಕರ ಎಚ್.ಸುರೇಶ, ರಮೇಶ,ಸಾಲ್ಮನಿ, ಗುರುಪ್ರಸಾದ,ಕಿರಿಯ ಆರೋಗ್ಯ ಸಹಾಯಕ ರಮೇಶ ಹಿರೇಮನಿ, ಉತ್ತಮ್, ಆರೋಗ್ಯ ಸಿಬ್ಬಂದಿಗಳಾದ ಹನುಮಂತಿ, ಮಂಜುಳಾ ಸಿಆರ್, ಸರಸ್ವತಿ, ಮಾಯಾ, ಖಾಸೀಬಿ,ಹನಮಂತಪ್ಪ, ಆಶಾ ಕಾರ್ಯಕರ್ತೆ ಲಾಲಬಿ,ವಿಜಯಲಕ್ಷ್ಮಿ ಆಚಾರ್ಯ, ಸುಮಾ,ಮೀನಾಕ್ಷಿ, ಜ್ಯೋತಿ ಸರೋಜಬಾಯಿ,ದೀಪಾ,ಆಪ್ರೀನ್,ಶರಣಮ್ಮ,ರೇಖಾ,ಸೇರಿದಂತೆ ಇತರರು ಇದ್ದರು