ಡೆಂಗ್ಯೂ ನಿಯಂತ್ರಣಕ್ಕಾಗಿ ಅಂತರ್ ವೈಯಕ್ತಿಕ ಮಾಹಿತಿ ಶಿಕ್ಷಣ

ಚಿತ್ರದುರ್ಗ.ಮೇ.೨೦; ರಾಷ್ಟ್ರೀಯ ಕೀಟ ಜನ್ಯ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಪ್ರತಿ ಮಾಹೆ ಮೊದಲನೇ ಶುಕ್ರವಾರ ಮತ್ತು ಮೂರನೇ ಶುಕ್ರವಾರದಂದು ಚಿತ್ರದುರ್ಗ ನಗರದ ಎಲ್ಲಾ ಮನೆ ಮನೆಗಳ ಭೇಟಿ ನೀಡಿ ಲಾರ್ವ ಸಮೀಕ್ಷೆ ಕಾರ್ಯಕ್ರಮ ನಡೆಸಲಾಯಿತು.ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಿಂದ ನಗರದ ವಿವಿಧೆಡೆ ಆರೋಗ್ಯ ಶಿಕ್ಷಣಾಧಿಕಾರಿಗಳ ತಂಡ ಭೇಟಿ ನೀಡಿ ಲಾರ್ವ ಸಮೀಕ್ಷೆ ಪರಿಶೀಲಿಸಿ ಡೆಂಗ್ಯೂ ಪ್ರಕರಣಗಳು ಕಂಡು ಬಂದ ಕೆಳಕೋಟೆ ಮುನ್ಸಿಪಲ್ ಕಾಲೋನಿ ಮಹಾಲಕ್ಷ್ಮಿ ದೇವಸ್ಥಾನದ ಬಳಿ ಮಾಹಿತಿ ಶಿಕ್ಷಣ ಅಂತರ್ ವೈಯಕ್ತಿಕ ಸಮಾಲೋಚನೆ ನಡೆಸಿ ಪರಿಸರ ಸ್ವಚ್ಛತೆ, ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಕಾಪಾಡಲು, ನೀರಿನ ತೊಟ್ಟಿಗಳನ್ನು ಶುಚಿಗೊಳಿಸಲು, ಸೊಳ್ಳೆಗಳಿಂದ ಸ್ವಯಂ ರಕ್ಷಣೆ ಪಡೆಯಲು, ಜೈವಿಕ ರಾಸಾಯನಿಕ ಪ್ರಾಕೃತಿಕ ವಿಧಾನಗಳನ್ನು ಅನುಸರಿಸಲು ಮಾರ್ಗದರ್ಶನ ನೀಡಿ ಸೊಳ್ಳೆಗಳ ಸಂತಾನೋತ್ಪತ್ತಿ ಮಾಡುವ ನೀರಿನ ತೊಟ್ಟಿಗಳನ್ನು ತೋರಿಸಿ ಲಾರ್ವ ಹಂತದಲ್ಲಿ ಸೊಳ್ಳೆಗಳನ್ನ ನಾಶ ಮಾಡಲು    𝚊𝚋𝚊𝚝𝚎 ದ್ರಾವಣ ಸಿಂಪಡಿಸಿ ಚರಂಡಿಯಲ್ಲಿ ನಿಂತ ನೀರಿಗೆ ವೇಸ್ಟ್ ಆಯಿಲ್ ಉಪಯೋಗಿಸುವಂತೆ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್ ಮಂಜುನಾಥ್ ತಿಳಿಸಿದರು.