ಡೆಂಗ್ಯೂ ಜ್ವರವನ್ನು ನಿಯಂತ್ರಿಸೋಣ

ಗದಗ, ಮೇ30: ನಮ್ಮ ಸುತ್ತಮುತ್ತಲಿನ ವಾತವರಣವನ್ನು ಸ್ವಚ್ಛವಾಗಿಟ್ಟುಕೊಂಡು ಡೆಂಗ್ಯೂ ಜ್ವರವನ್ನು ನಿಯಂತ್ರಿಸೋಣ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಲಕ್ಷ್ಮಣ ಪೂಜಾರ ಹೇಳಿದರು

ಮುಂಡರಗಿ ತಾಲೂಕ ಪಂಚಾಯತಿ ಮುಂಡರಗಿಯಲ್ಲಿ ಜಿಲ್ಲಾ ಆಡಳಿತ ,ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಇಲಾಖೆ, ತಾಲೂಕ ಆಡಳಿತ, ತಾಲೂಕ ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚಾರಣೆ ಅಂಗವಾಗಿ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಿಗೆ ಏರ್ಪಡಿಸಿದ್ದ ಅಡ್ವೋಕೆಸಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡೆಂಗ್ಯೂ ಜ್ವರದ ವಿಧಗಳಾದ ಡೆಂಗ್ಯೂ ಜ್ವರ, ಡೆಂಗ್ಯೂ ರಕ್ತ ಸ್ರಾವ, ಡೆಂಗ್ಯೂ ಶಾಕ್ ಸಿಂಡ್ರೋಮ್ ರೋಗಕ್ಕೆ ರೋಗದ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುವುದು ಈ ಬಗ್ಗೆ ಜನರಿಗೆ ಹೆಚ್ಚಿನ ಅರಿವನ್ನು ಮೂಡಿಸಬೇಕು ಎಂದರು.

ರೋಗ ಬರದ ಹಾಗೇ ಮುನ್ನೆಚರಿಕೆ ಕ್ರಮಗಳಾದ ಮನೆಯ ಸುತ್ತ ಮುತ್ತ ನೀರು ನಿಲ್ಲದ ಹಾಗೆ ಸ್ವಚ್ಚವಾಗಿ ಇಡಬೇಕು ಮತ್ತು ಮನೆಯ ಒಳಗೆ ನೀರು ತುಂಬುವ ಪಾತ್ರೆಗಳನ್ನು ವಾರಕ್ಕೊಮ್ಮೆ ಸ್ವಚ್ಚವಾಗಿ ತೊಳೆದು ಒಣಗಿಸಿ ನೀರು ತುಂಬಿ ಮೇಲಗಡೆ ಮುಚ್ಚಬೇಕು. ಮತ್ತು ಮನೆಯ ಕಿಟಕಿಗಳಿಗೆ ಜಾಲರಿಗಳನ್ನು ಬಳಸಬೇಕು ಮತ್ತು ಮಲಗುವಾಗ ಸೊಳ್ಳೆ ಪರದೇಗಳನ್ನು ಬಳಸಬೇಕು ಮತ್ತು ಸಾಯಂಕಾಲ ಬೇವಿನ ಸೊಪ್ಪಿನ ಹೊಗೆಯನ್ನು ಹಾಕಬೇಕು ರಾಸಾಯನಿಕ ವಿಧಾನ ಧೂಮೀಕರಣ ಮಾಡುವುದು .ಜೈವಿಕ ನಿಯಂತ್ರಣ ಲಾರ್ವಾಹಾರಿ ಮೀನುಗಳನ್ನು ಸಾಕಾಣೆ ಮಾಡುಬೇಕು ಎಂದು ಹೇಳಿದರು

ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಮಾತನಾಡಿ ಎಲ್ಲಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಸ್ಥರಿಗೆ ಡೆಂಗ್ಯೂ ಜ್ವರದ ಲಕ್ಷಣ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಸಮುದಾಯಕ್ಕೆ ಪ್ರಚಾರ ಮಾಡುವುದರ ಮೂಲಕ ಡೆಂಗ್ಯೊ ಜ್ವರವನ್ನ ನಿಯಂತ್ರಿಸಬೇಕೆಂದು ಹೇಳಿದರು.

ಕಾರ್ಯಾಗಾರದಲ್ಲಿ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಮ್.ಎಸ್.ಸಜ್ಜನರ ಮಾತನಾಡಿ, ಡೆಂಗ್ಯೂ ರೋಗ, ಈಡಿಸ್ ಇಜಿಪ್ಟೆ ಸೊಳ್ಳೆಯ ಕಚ್ಚುವಿಕೆಯಿಂದ ಹರಡುತ್ತದೆ ಗ್ರಾಮಗಳಲ್ಲಿ ಜ್ವರದ ಪ್ರಕರಣಗಳು ಏರಿಕೆಯಾದ ಸಂದರ್ಭದಲ್ಲಿ ಅಗತ್ಯ ಕ್ರಮಗಳನ್ನೂ ಕೈಗೊಳ್ಳುವಲ್ಲಿ ಪಿಡಿಓ ಮತ್ತು ಸಮುದಾಯದ ಪಾತ್ರ ಬಹುಮುಖ್ಯವಾಗಿದೆ ಹಾಗಾಗಿ ಗ್ರಾಮದಲ್ಲಿ ಟೀ ಕಾಫಿ ಅಂಗಡಿ, ಎಳೆನೀರು ಮಾರುವವರು, ಬೇಕರಿ, ಹೊಟೀಲ್, ಸೇರಿದಂತೆ ಸಮುದಾಯ ಭವನ, ಸಂತೆ ನಡೆಯುವ ಪ್ರದೇಶಗಳಲ್ಲಿ ಘನ ತ್ಯಾಜ್ಯ ಸಂಗ್ರಹಿಸಿ ಸರಿಯಾಗಿ ವಿಲೇವಾರಿ ಮಾಡಲು ಪಿಡಿಓ ರವರು ಸಮುದಾಯದ ಜನರಿಗೆ ತಿಳಿಸಿ ಹೇಳಬೇಕು. ಮತ್ತು ಸಮುದಾಯದೊಂದಿಗೆ ಸೇರಿ ಡೆಂಗ್ಯೂ ಜ್ವರವನ್ನು ನಿಯಂತ್ರಿಸೋಣ ಎಂದು ಈ ವರ್ಷದ ಘೋಷವಾಕ್ಯವನ್ನು ಹೇಳಿದರು.

ಕಾರ್ಯಕ್ರಮವನ್ನು ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಮ್.ಎಸ್.ಸಜ್ಜನರ ಸ್ವಾಗತಿಸಿದರು, ಪಿಡಿಓ ಮಹೇಶ ಅಲ್ಲಿಪೂರ ವಂದಿಸಿದರು.