ಡೆಂಗ್ಯೂಗೆ ಲಸಿಕೆ ಭಾರತದ ದಿಟ್ಟ ಹೆಜ್ಜೆ

ನವದೆಹಲಿ,ಮೇ.೧೭-ಮಾರಣಾಂತಿಕವಾಗಬಹುದಾದ ಡೆಂಗ್ಯೂ ರೋಗಕ್ಕೆ ಸ್ಥಳೀಯವಾಗಿ ಲಸಿಕೆ ಅಭಿವೃದ್ದಿ ಪಡಿಸುವ ಸನಿಹಕ್ಕೆ ಭಾರತ ಹೆಜ್ಜೆ ಇಟ್ಟಿದೆ.
ಪುಣೆಯ ಭಾರತೀಯ ಸೆರಂ ಸಂಸ್ಥೆ ಮತ್ತು ಪ್ಯಾನೇಸಿಯಾ ಬಯೋಟೆಕ್ ಕ್ಲಿನಿಕಲ್ ಸಂಸ್ಥೆಗಳು ಡೆಂಗ್ಯೂಗೆ ಲಸಿಕೆ ಪಡೆಯುವ ನಿಟ್ಟಿನಲ್ಲಿ ಹೆಜ್ಕೆಹಾಕಿವೆ.
ಡೆಂಗ್ಯೂಗೆ ಅಭಿವೃದ್ದಿ ಪಡಿಸಿರುವ ಲಸಿಕೆಯನ್ನು ಈ ಎರಡೂ ಔಷಧ ತಯಾರಿಕಾ ಸಂಸ್ಥೆ ಗಳು ಕ್ಲಿನಿಕಲ್ ಹಂತ ಮೂರರ ಪ್ರಯೋಗದ ವರದಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ ಸಲ್ಲಿಸಿವೆ.
ಡೆಂಗ್ಯೂ ವಿರುದ್ಧ ದೇಶದ ಮೊದಲ ಲಸಿಕೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುವಂತೆ, ಔಷಧಿ ತಯಾರಕರಾದ ಭಾರತೀಯ ಸೆರಂ ಸಂಸ್ಥೆ ಮತ್ತು ಪ್ಯಾನೇಸಿಯಾ ಬಯೋಟೆಕ್ ಸಂಸ್ಥೆಗಳು ಅನುಮತಿಗಾಗಿ ಕೋರಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ ಮನವಿ ಮಾಡಿವೆ.
ಭಾರತೀಯ ಔಷಧ ತಯಾರಕರು ಅಭಿವೃದ್ಧಿಪಡಿಸಿದ ಟೆಟ್ರಾವಲೆಂಟ್ ಡೆಂಗ್ಯೂ ಲಸಿಕೆ ಅಭ್ಯರ್ಥಿಯ ಸುರಕ್ಷತೆ ಮತ್ತು ಇಮ್ಯುನೊಜೆನಿಸಿಟಿ ಜೊತೆಗೆ ಪರಿಣಾಮಕಾರಿಯಾಗಿದೆ ವಯಸ್ಕರ ಲಸಿಕೆಗಾಗಿ ಪ್ರಯೋಗಗಳು ಆಗಸ್ಟ್‌ನಲ್ಲಿ ಪ್ರಾರಂಭವಾಗಬಹುದು ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.ಐಸಿಎಂಆರ್ ಪ್ರಕಾರ, ಡೆಂಗ್ಯೂ ವೈರಸ್ ರೋಗ ಪ್ರಪಂಚದಾದ್ಯಂತ ಗಮನಾರ್ಹವಾದ ಕಾಯಿಲೆ ಮತ್ತು ಸಾವು ಉಂಟು ಮಾಡಲಿದೆ. ಭಾರತದಲ್ಲಿ, ವಾರ್ಷಿಕವಾಗಿ ೨ ರಿಂದ ೨.೫ ಲಕ್ಷ ಪ್ರಕರಣಗಳು ಡೆಂಗ್ಯೂನಿಂದ ವರದಿಯಾಗುತ್ತವೆ ಎಂದು ತಿಳಿಸಿದೆ.
ಡೆಂಗ್ಯೂ ನಿಂದ ಪ್ರಪಂಚದ ಅರ್ಧದಷ್ಟು ಜನಸಂಖ್ಯೆ ಈಗ ಅಪಾಯದಲ್ಲಿದೆ. ಪ್ರತಿ ವರ್ಷ ಅಂದಾಜು ೧೦೦-೪೦೦ ದಶಲಕ್ಷ ಸೋಂಕುಗಳು ಸಂಭವಿಸಿದರೂ, ಶೇ.೮೦ ಕ್ಕಿಂತ ಹೆಚ್ಚು ಸಾಮಾನ್ಯವಾಗಿ ಸೌಮ್ಯ ಮತ್ತು ಲಕ್ಷಣರಹಿತವಾಗಿರುತ್ತದೆ. ಆದ್ದರಿಂದ, ವಿಶ್ವ ಆರೋಗ್ಯ ಸಂಸ್ಥೆ ಡೆಂಗ್ಯೂ ೨೦೧೯ ರಲ್ಲಿ ಹತ್ತು ಜಾಗತಿಕ ಆರೋಗ್ಯ ಬೆದರಿಕೆಗಳಲ್ಲಿ ಒಂದಾಗಿದೆ ಎಂದು ಹೇಳಿದೆ.
ಈಗಿನ ಪ್ರಕಾರ ಡೆಂಗ್ಯೂ, ತೀವ್ರವಾದ ಡೆಂಗ್ಯೂಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದ್ದರಿಂದ, ಡೆಂಗ್ಯೂ ವೈರಸ್ ರೋಗದ ವಿರುದ್ಧ ಪರಿಣಾಮಕಾರಿ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ತುರ್ತು ಅಗತ್ಯವಿದೆ ಎಂದು ಐಸಿಎಂಆರ್ ಹೇಳಿದೆ.