ಡೆಂಗೀ ದಿನ : ಬೈಸಿಕಲ್ ಜಾಥಾ*

ಶಿವಮೊಗ್ಗ, ಮೇ 17: 2023 ರ ರಾಷ್ಟ್ರೀಯ ಡೆಂಗೀ ದಿನದ ಅಂಗವಾಗಿ ದಿ: 16-05-2023 ರ ಬೆಳಿಗ್ಗೆ ಏರ್ಪಡಿಸಲಾಗಿದ್ದ  ಬೈಸಿಕಲ್ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ಇವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಸ್ಥಳೀಯ ರೋಟರಿ ಸಂಘ ಸಂಸ್ಥೆಗಳ ವತಿಯಿಂದ ಬೈಸಿಕಲ್ ಜಾಥಾವನ್ನು ಏರ್ಪಡಿಸಲಾಗಿದ್ದು ಜಾಥಾವು ಹೊಳೆ ಬಸ್ ನಿಲ್ದಾಣದಿಂದ ಹೊರಟು ವಿದ್ಯಾನಗರ, ಎಂ.ಆರ್.ಎಸ್ ವೃತ್ತದಲ್ಲಿ ಸಾಗಿ ಬಂದು ಮೀನಾಕ್ಷಿ ಭವನ್, ಬಾಪೂಜಿ ನಗರ, ಮಹಾವೀರ ವೃತ್ತ, ಗೋಪಿ ಸರ್ಕಲ್, ಮೂಲಕವಾಗಿ ಭಾರತೀಯ ವೈದ್ಯಕೀಯ ಸಂಘದ(ಐಎಂಎ) ಆವರಣದಲ್ಲಿ ಅಂತ್ಯಗೊಂಡಿತು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಗುಡುದಪ್ಪ, ರೋಟರಿ ಸಂಸ್ಥೆ ಹಾಗೂ ಐಎಂಎ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಂಡಿದ್ದರು.