ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.22: ತಾಲ್ಲೂಕಿನ ಹಳೇಕೋಟೆ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ 154ಎ ರಲ್ಲಿ ಡೀಸೆಲ್ ಲಾರಿಯೊಂದು ಪಲ್ಟಿಯಾದ ಘಟನೆ ನಡೆದಿದೆ.
ಹಾಸನದಿಂದ ಬೀದರ್ ಗೆ ಸಾಗುತಿದ್ದ ರಿಲಯನ್ಸ್ ಪೆಟ್ರೋಲಿಯಂ ನ 20 ಸಾವಿರ ಲೀಟರ್ ಸಾಮರ್ಥ್ಯದ ಡೀಸೆಲ್ ತುಂಬಿದ ಲಾರಿ ಚಾಲಕನ ನಿಯಾಂತ್ರಣ ತಪ್ಪಿ ಪಲ್ಟಿಯಾಗಿ ಬಿದ್ದಿದ್ದು ಯಾವುದೇ ಅನಾಹುತ ಸಂಭವಿಸಿರುವುದಿಲ್ಲ.
ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಹನುಮನಗೌಡ ಪಾಟೀಲ್, ಸಿರುಗುಪ್ಪ ಅಗ್ನಿ ಶಾಮಕ ಪ್ರಭಾರಿ ಠಾಣಾಧಿಕಾರಿ ಅರ್.ಎಲ್ ಪೂಜಾರಿ, ಸಿಬ್ಬಂದಿಗಳು ಕಾರ್ಯಚರಣೆ ನಡೆಸಿದರು.
ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.