ಡಿ:25ರಂದು ಒಂದು ಬೊಗಸೆ ನೋರು ನಾಟಕ

ಮೈಸೂರು:ಡಿ:23: ನಗರದ ಹವ್ಯಾಸಿ ರಂಗತಂಡವಾದ ರಂಗಸ್ಮøತಿ ಸಾಂಸ್ಕøತಿಕ ಸಂಘಟನೆ ವತಿಯಿಂದ ಡಾ. ರಾಜಪ್ಪ ದಳವಾಯಿರವರ ಒಂದು ಬೊಗಸೆ ನೀರು ನಾಟಕವನ್ನು ಡಿ:25 ಸಂಜೆ 7 ಗಂಟೆಗೆ ಕಲಾಮಂದಿರ ವೇದಿಕೆಯಲ್ಲಿ 2 ಯಶಸ್ವಿ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಮುನ್ನ ನಾಟಕ ಕಾರರಾದ ಡಾ. ರಾಜಪ್ಪ ದಳವಾಡಯಿ, ರಂಗಕರ್ಮಿಗಳಾದ ಬಸವಲಿಂಗಯ್ಯ, ರಂಗಾಯಣ ನಿರ್ದೇಶಕರಾದ ಅಡ್ಡಾಂಡ ಕಾರಿಯಪ್ಪ, ಕಟ್ಟಿಮನಿ ರಂಗಕರ್ಮಿ ಹುಲಿಗಪ್ಪ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದು ಅಂತರ ಕಾಯ್ದುಕೊಂಡು ವೀಕ್ಷಿಸುವ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ನವೀನ್‍ನೇತಾಜಿ ತಿಳಿಸಿದರು. ಇದೇ ಸಂದರ್ಭದಲ್ಲಿ ನಾಟಕದ ಪೋಸ್ಟರ್‍ನನ್ನು ಬಿಡುಗಡೆಗೊಳಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಲಿಖಿತ್, ಪ್ರದೀಪ್, ವಿಷ್ಣು.ಎನ್.ರಾಜ್, ಶಿವಕಾರ್ತಿಕೆ, ಪವನ್ ಇತರರು ಇದ್ದರು.