ಡಿ. 9 ರಂದು ನ್ಯಾಷನಲ್ ಲೋಕ ಅದಾಲತ್

ಕಲಬುರಗಿ,ನ.21: ಡಿಸೆಂಬರ್ 9 ರಂದು ಕಲಬುರಗಿ ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳ ಆವರಣದಲ್ಲಿ ನ್ಯಾಷನಲ್ ಲೋಕ ಅದಾಲತ್ ಜರುಗಲಿದೆ. ಸಾರ್ವಜನಿಕರು ಮೇಲ್ಕಂಡ ದಿನದಂದು ನಡೆಯುವ ಈ ಲೋಕ ಅದಾಲತ್‍ನ ಸದುಪಯೋಗ ಪಡೆದುಕೊಳ್ಳಬೇಕು. ಸುತ್ತೋಲೆ/ಮಾರ್ಗದರ್ಶನ/ಸೂಚನೆಗಳನ್ನು ಈ ಕಾರ್ಯಾಲಯದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಕಲಬುರಗಿ ಸಹಕಾರ ಸಂಘಗಳ ಉಪ ನಿಬಂಧಕರು ತಿಳಿಸಿದ್ದಾರೆ.