ಡಿ.7ರಂದು ಶಿಲಾನ್ಯಾಸ ಸಮಾರಂಭ

ದಾವಣಗೆರೆ.ಡಿ.೫: ನಗರದ ಶ್ರೀ ವೀರ ಮಾಹೇಶ್ವರ ಕ್ರೆಡಿಟ್ ಕೋ – ಆಪ್ ಸೊಸೈಟಿಯ ನೂತನ ಕಟ್ಟಡದ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ಸಮಾರಂಭ ಡಿ. 7ರಂದು ನಗರದ ಕೆ.ಬಿ. ಬಡಾವಣೆಯಲ್ಲಿ ನಡೆಯಲಿದೆ ಎಂದು ಸೊಸೈಟಿಯ ಅಧ್ಯಕ್ಷ ತ್ಯಾವಣಿಗಿ ವೀರಭದ್ರಸ್ವಾಮಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಡಿ. 7ರಂದು ಬೆಳಿಗ್ಗೆ 11ಕ್ಕೆ ನಗರದ ಬಳ್ಳಾರಿ ಸಿದ್ಧಮ್ಮ ಪಾರ್ಕ್ ಹತ್ತಿರದ 10 ನೇ ಕ್ರಾಸ್  ನಿವೇಶನದಲ್ಲಿ ಕಾರ್ಯಕ್ರಮ ನಡೆಯಲಿದ್ದು , ಸಾನಿಧ್ಯವನ್ನು ಬಾಳೇಹೊನ್ನೂರು ರಂಭಾಪುರಿ ಪೀಠದ  ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶೀ ಕೇಂದ್ರ ಶಿವಾಚಾರ್ಯ ಶ್ರೀಗಳು ವಹಿಸುವರು.ನೇತೃತ್ವವನ್ನು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದಾರೆ ಎಂದರು.ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ನೆರವೇರಿಸಲಿದ್ದು , ಸಂಸದ ಡಾ. ಜಿ.ಎಂ.ಸಿದ್ಧೇಶ್ವರ್ ಶಿಲಾನ್ಯಾಸ ಅನಾವರಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಎಸ್.ಎ. ರವೀಂದ್ರನಾಥ್, ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಮಹಾಪೌರ ಎಸ್.ಟಿ.ವೀರೇಶ್ , ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ದಾವಣಗೆರೆ – ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎಂ ಮುರುಗೇಶ್ ಆಗಮಿಸುವರು. ಅಧ್ಯಕ್ಷತೆಯನ್ನು ಶ್ರೀ ವೀರಮಾಹೇಶ್ವರ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಯ ಅಧ್ಯಕ್ಷ ತ್ಯಾವಣಿಗಿ ವೀರಭದ್ರಸ್ವಾಮಿ ವಹಿಸುವರು. ಸೊಸೈಟಿಯ ಉಪಾಧ್ಯಕ್ಷ ಪಂಚಾಕ್ಷರಯ್ಯ , ನಿರ್ದೇಶಕರಾದ ಬಿ.ಎಂ.ರವಿ , ಎಂ.ಎಂ.ವೃಷಭೇಂದ್ರಯ್ಯ , ಕೆ.ಎಂ.ಬಸವರಾಜ್, ಆರ್.ಎಂ.ವೀರಯ್ಯ , ತಾರಾಕೇಶ್ವರಿ , ರೇಖಾ ಇತರೆ ಗಣ್ಯರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಎಂ.ಎಂ.ವೃಷಭೇಂದ್ರಯ್ಯ, ಪಂಚಾಕ್ಷರಯ್ಯ, ಆರ್.ಎಂ.ವೀರಯ್ಯ, ಬಿ.ಎಂ.ರವಿ ಇತರರು ಇದ್ದರು.