ಡಿ. 6 ರಂದು ಬೆಂಗಳೂರಿನಲ್ಲಿ ಬೃಹತ್ ಐಕ್ಯತಾ ಸಮಾವೇಶ

ಗುರುಮಠಕಲ್ : ನ.22:ಸಂವಿಧಾನ ರಕ್ಷಣೆ ಮತ್ತು ಪ್ರಜಾಪ್ರಭುತ್ವ ರಕ್ಷಣೆಗಾಗಿ ಡಿ. 6ರಂದು ಬೆಂಗಳೂರು ನಲ್ಲಿ ನಡೆಯುವ ಬೃಹತ್ ಐಕ್ಯತಾ ಸಮಾವೇಶ ಕ್ಕೆ ತಾಲ್ಲೂಕಿನ ಎಲ್ಲ ಡಿ ಎಸ್ ಎಸ್ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ಸುಗೊಳಿಸಬೇಕು ಎಂದು ಡಿ ಎಸ್ ಎಸ್ ಜಿಲ್ಲಾ ಸಂಚಾಲಕ ಮರ್ರೇಪ್ಪ ಚೇಟರ್ಕರ್ ಹೇಳಿದರು.
ಪಟ್ಟಣದ ಪ್ರವಾಸ ಮಂದಿರದಲ್ಲಿ ತಾಲೂಕ ಡಿ ಎಸ್ ಎಸ್ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಎಲ್ಲ ದಲಿತ ಸಂಘಟನೆಗಳು ಒಂದಾಗಿ ಕಾರ್ಯ ನಿರ್ವಹಿಸಬೇಕು ಮತ್ತು ದಲಿತರ ಕಲ್ಯಾಣಕ್ಕಾಗಿ ದುಡಿಯಬೇಕು ಇದ್ಕಕಾಗಿ ನಾವೆಲ್ಲಾ ಡಿ ಎಸ್ ಎಸ್ ಸಂಘಟನೆಗಳು ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು.
ಇದೆ ವೇಳೆ ತಾಲ್ಲೂಕಿನ ಸಂಘದ ಅಧ್ಯಕ್ಷ ಲಾಲಪ್ಪ ತಲಾರಿ, ಚಂದಪ್ಪ ಮುನಿಯಪ್ಪ ನೋರ್, ಮರಳು ಸಿದ್ದ ನಾಯ್ಕಲ್, ಸೈದಪ್ಪ ಕುಲುರ್, ತಾಯಪ್ಪ ಬಂಡಾರಿ, ರಂಗ ಸ್ವಾಮಿ, ನರಸಿಂಹಲು, ರವಿ ಮಲ್ಲಪ್ಪ ಚಾಪೆಟ್ಲ, ಕಾಶಪ್ಪ, ನಿಂಗಪ್ಪ ಬೀರನಳ್ ಸೇರಿದಂತೆ ಇತರರು ಇದ್ದರು