ಡಿ.5 ರಿಂದ ಉಪವಾಸ ಸತ್ಯಾಗ್ರಹ-ಹೊರಟ್ಟಿ

ಧಾರವಾಡ, ನ 21- ಎನ್. ಎ. ಮುತ್ತಣ್ಣ ಪೆÇಲೀಸ ಮಕ್ಕಳ ವಸತಿ ಶಾಲೆಯ ಶಿಕ್ಷಕರ ವೇತನ ಬಿಡುಗಡೆ ಮಾಡುವುದರ ಜೊತೆಗೆ ಶಾಲೆ ಆರಂಭಿಸಲು ಅನುಮತಿ ನೀಡಬೇಕು ಎಂದು ವಿಧಾನ ಪರಿಷತನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಆಗ್ರಹಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ 2020-21 ನೇ ಸಾಲಿನಲ್ಲಿ 125 ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದರ ಪೈಕಿ 80 ವಿದ್ಯಾರ್ಥಿಗಳು ಪ್ರವೇಶ ಪಡೆದು ಆನ್ ಲೈನ್ ತರಗತಿಗಳಿಗೆ ಹಾಜರಾಗಿದ್ದಾರೆ. ಆದರೆ ಕಳೆದ 9 ತಿಂಗಳಿಂದ ಶಾಲೆಯ ಶಿಕ್ಷಕರಿಗೆ ವೇತನವೇ ನೀಡಿಲ್ಲ ಎಂದು ದೂರಿದರು.
ಈ ಶಾಲೆ ಉಳಿಸಲು ಸಿಎಂ ಭೇಟಿಯಾಗಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಹಾಗೂ ಶಾಲೆಯ ಅನುದಾನ ಬಿಡುಗಡೆ ಮಾಡಲು ಕೋರಿದರೂ ಈವರೆಗೂ ಸ್ಪಂದನೆ ಲಭಿಸಿಲ್ಲ. ಈ ಕಾರಣದಿಂದ ಬೇಸತ್ತು ಡಿ.5 ರಿಂದ ಡಿಸಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಹೊರಟ್ಟಿ ಎಚ್ಚರಿಸಿದರು.