ಡಿ.5 ರಂದು ರಾಜ್ಯ ಪತ್ರಿಕೋದ್ಯಮ ರತ್ನ ಪ್ರಶಸ್ತಿ ಪ್ರದಾನ

ಗುಳೇದಗುಡ್ಡ ನ.25- ಪತ್ರಿಕಾ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಕೊಡ ಮಾಡುವ ರಾಜ್ಯ ಪತ್ರಿಕೋದ್ಯಮ ರತ್ನ ಪ್ರಶಸ್ತಿಗೆ ಪಟ್ಟಣದ ಹಿರಿಯ ಪತ್ರಕರ್ತ ವೈ.ಜಿ.ಬ್ಯಾಡಗಿ ಹಾಗೂ ರಾಜ್ಯ ಪತ್ರಕರ್ತರ ರತ್ನ ಪ್ರಶಸ್ತಿಗೆ ಪಟ್ಟಣದ ಇನ್ನೋರ್ವ ಯುವ ಪತ್ರಕರ್ತ ಮಹೇಶ ಶೇಬಿನಕಟ್ಟಿ ಇವರು ಆಯ್ಕೆಯಾಗಿದ್ದಾರೆ.
ಡಿ.5 ರಂದು ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜರುಗುವ ರಾಜ್ಯ ಪ್ರಶಸ್ತಿಗಳ ಪ್ರಧಾನ ಸಮಾರಂಭದಲ್ಲಿ ಪತ್ರಕರ್ತ ವೈ.ಜಿ.ಬ್ಯಾಡಗಿ ಮತ್ತು ಮಹೇಶ ಶೇಬಿನಕಟ್ಟಿ ಇವರು ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ.
ರಾಜ್ಯಸಭಾ ಸಂಸದ ಡಾ. ಎಲ್. ಹನುಮಂತಯ್ಯನವರು, ಮಹದೇವಪುರ ಕ್ಷೇತ್ರದ ಮಾಜಿ ಸಚಿವ, ಶಾಸಕ ಅರವಿಂದ ಲಿಂಬಾವಳಿ, ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಡಾ.ಲಕ್ಷ್ಮಣ ಸಿಂಗ್, ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎಂ. ಟಿಪ್ಪುವರ್ಧನ್ ಅವರು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ಮುರಾರಿ ಸ್ವಾಮಿಗಳ ಪುಣ್ಯ ಕ್ಷೇತ್ರ ಗಾಜಗಾರಗುಪ್ಪೆ ಮಾಗಡಿ ತಾಲ್ಲೂಕಿನ ಡಾ. ಕುಮಾರಸ್ವಾಮಿ ಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವರು.
ಇಂಡಿಯನ್ ಲಾಂಗ್‍ವೇಜಸ್ ನೂಜ್ ಪೇಪರ್ಸ್ ಅಸೋಸಿಯೇಶನ್ ನ್ಯೂ ದೆಹಲಿಯ ಅಕ್ಬರ ಬೆಳಗಾಂವ್‍ಕರ್, ಖ್ಯಾತ ಚಲನ ಚಿತ್ರ ನಿರ್ಮಾಪಕರಾದ ಬಾ.ಮ. ಹರೀಶ್, ಅವಿನಾಶ ಶೆಟ್ಟಿ, ಭಾಜಪ ರಾಜ್ಯ ಕಾರ್ಯಕಾರಣಿ ಸದಸ್ಯ ಎಸ್. ಮಾರಪ್ಪ, ಕಾಂಗ್ರೆಸ್ ಮುಖಂಡ ಚಿನ್ನಪ್ಪ ಎ, ಹಿರಿಯ ಪತ್ರಕರ್ತ ರಮೇಶ ಸೂರ್ವೆ, ಮೈಸೂರಿನ ರವೀಶ ಕುಮಾರ್, ಮಾಧ್ಯಮ ಅಕಾಡೆಮಿ ಪುರಸ್ಕøತ ಬಂಗ್ಲೆ ಮಲ್ಲಿಕಾರ್ಜುನ್, ಚಲನಚಿತ್ರ ನಟರಾದ ಡಾ. ಚಿಕ್ಕಹೆಜ್ಜಾಜಿ ಮಹಾದೇವ, ಮೈಸೂರ ರಮಾನಂದ, ಕುಮಾರಿ ಗೀತಪ್ರೀಯಾ, ಗೌತಮಿ, ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಬಿ.ಎಸ್.ಅಲಗು, ಸೂರಜ್ ಟಿ, ನಂದೀಶ ಗುಂಡ್ಲುಪೇಟೆ ಇವರುಗಳು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಅಭಿನಂದನೆ : ರಾಜ್ಯ ಪತ್ರಿಕೋಧ್ಯಮ ರತ್ನ ಪ್ರಶಸ್ತಿಗೆ ಪಟ್ಟಣದ ಹಿರಿಯ ಪತ್ರಕರ್ತ ವೈ.ಜಿ.ಬ್ಯಾಡಗಿ ಹಾಗೂ ರಾಜ್ಯ ಪತ್ರಕರ್ತರ ರತ್ನ ಪ್ರಶಸ್ತಿಗೆ ಆಯ್ಕೆಯಾದ ಯುವ ಪತ್ರಕರ್ತ ಮಹೇಶ ಶೇಬಿನಕಟ್ಟಿ ಇವರಿಗೆ ಗುಳೇದಗುಡ್ಡ ತಾಲ್ಲೂಕಿನ ಪತ್ರಕರ್ತರು ಅಭಿನಂದನೆ ಸಲ್ಲಿಸಿದ್ದಾರೆ.