ಡಿ. 4 ರವರೆಗೆ ವಿವಿಧ ಕಾರ್ಯಕ್ರಮಗಳು


ರಾಣೇಬೆನ್ನೂರು, ನ.29: ರಾಷ್ಟ್ರದಎರಡನೆಯ ಹಾಗೂ ರಾಜ್ಯದ ಮೊದಲನೆಯ ಶನೈಶ್ಚರ ಸ್ವಾಮಿಯ ಬಯಲುಆಲಯದಗಂಗಾಪುರರಸ್ತೆಯ ಹಿರೇಮಠ ಶನೈಶ್ಚರ ಮಂದಿರದಲ್ಲಿ ಇಂದಿನಿಂದ ಡಿ. 4 ರವರೆಗೆ ಲೋಕಕಲ್ಯಾಣಾರ್ಥ ಮತ್ತು ಪ್ರದೇಶಾಭಿವೃದ್ಧಿಗಾಗಿಎರಡು ಮಹಾಮಂಡಲ (384 ದಿನ) ಗಳ ಕಾಲ ನಡೆದಜಪಾನುಷ್ಠಾನ ಪೂಜಾ ಪ್ರವಚನ ಮಂಗಲ. ಶ್ರೀ ಶನೈಶ್ಚರ ಸ್ವಾಮಿಯ 9 ನೇ ವಾರ್ಷಿಕೋತ್ಸವ, ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರಕಲ್ಯಾಣ ಮಹೋತ್ಸವ, ರೈತಚೈತನ್ಯಜೋತಿಯಾತ್ರೆ, ಸಾವಯವ ಕೃಷಿ ಮೇಳ, ಯೋಧ ನಮನ, 384 ಬಾಗಿನ ಸಮರ್ಪಣೆ, ಕ್ಷೀರಕುಂಬೋತ್ಸವ, 64 ಮಂಟಪ ಪೂಜೆ, ಮಾತೃ ಸಂಗಮ ಸಮಾವೇಶ, ಮನುಕುಲ ಸದ್ಭಾವನಾರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮನುಕುಲ ಸದ್ಭಾವನಾ ಬೆಳಕಿನ ಧರ್ಮ ಸಮಾರಂಭ, ಜ್ಞಾನ ಲಕ್ಷದಿಪೋತ್ಸವಕಾರ್ಯಕ್ರಮ ನಡೆಯಲಿದೆಎಂದು ಶನೈಶ್ಚರ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸಂಜೆ 5:30 ಕ್ಕೆ ಗೋಧೂಳಿ ಸಮಯದಲ್ಲಿ ಪಂಚಾಚಾರ್ಯಧರ್ಮದ್ವಜಾರೋಹಣ ನೆರವೆರಲಿದೆ ಎಂದರು.
ಇಂದು ನಡೆಯುವ ಕಾರ್ಯಕ್ರಮದಲ್ಲಿ ಗುರು ನಂಜೇಶ್ವರಮಠ ಕೂಡಲದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ತಿಪ್ಪಾಯಿಕೊಪ್ಪದ ಮಹಾಂತ ಸ್ವಾಮಿಗಳು ಕಾರ್ಯಕ್ರಮದ ನೇತೃತ್ವ ವಹಿಸುವರು. ಹೇರೂರಿನ ನಂಜುಂಡ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿರುವರು. ಕಾರ್ಯಕ್ರಮವನ್ನು ಕ.ಸಾ.ಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಉದ್ಘಾಟಿಸುವರು. ಕೆ.ಸಿ.ನಾಗರಜ್ಜಿ ಪ್ರಾಸ್ತಾವಿಕ ನುಡಿ ನುಡಿಯುವರು. ಶಿವಕುಮಾರ ಜಾಧವ ಸ್ವಾಗತಿಸುವರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ವರಿಷ್ಠಾಧಿಕಾರಿ ಹನುಮಂತರಾಯ, ತಹಶೀಲದಾರ ಜಿ.ಎಸ್.ಶಂಕರ್, ಸ್ವಾಭಿಮಾನಿ ಕರವೇಅಧ್ಯಕ್ಷ ನಿತ್ಯಾನಂದಕುಂದಾಪುರ, ಟಿಎಚ್‍ಓಡಾ. ಸಂತೋಷಕುಮಾರ, ನಗರಸಭೆ ಪೌರಾಯುಕ್ತಉದಯಕುಮಾರ, ಬಿಇಓ ಗುರುಪ್ರಸಾದ, ಕ್ಷೇ.ಧ.ಗ್ರಾ.ಯೋಜನೆ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ, ಗ್ರಾಮೀಣ ಸಿಪಿಐ ಶ್ರೀಶೈಲ ಚೌಗಲಾ, ನಗರ ಸಿಪಿಐ ಎಂ.ಐ ಗೌಡಪ್ಪನವರ, ತಾ.ಪಂ. ಇಓ ಟಿ.ಆರ್.ಮಲ್ಲಾಡದ, ಕೊಟ್ರೇಶಪ್ಪ ಎಮ್ಮಿ ಆಗಮಿಸುವರು.
ನಗರಸಭೆ ಸದಸ್ಯರಾದ ಶಶಿಧರ ಬಸೇನಾಯ್ಕರ, ಪ್ರಕಾಶ ಪೂಜಾರ, ಶೇಖಪ್ಪ ಹೊಸಗೌಡ್ರ, ಗುರುರಾಜ ತಿಳವಳ್ಳಿ, ಹುಚ್ಚಪ್ಪ ಮೇಡ್ಲೇರಿ, ಹನುಮಂತಪ್ಪ ಹೆದ್ದೇರಿ, ರಾಮಪ್ಪಕರಡೆಣ್ಣನವರ, ಗೌರವಗುರುರಕ್ಷೆ ಪಡೆಯುವರು. ವನಹಳ್ಳಿ ಗ್ರಾ.ಪಂ. ಸದಸ್ಯಗಂಗಾಧರಕಲ್ಮಠ ಪೂಜಾ ಸೇವೆ ನೆರವೇರಿಸುವರು.ದಾಸೋಹವನ್ನು ಪಾಂಡುರಂಗಗಂಗಾವತಿಒದಗಿಸುವರು.ಕಾರ್ಯಕ್ರಮದಲ್ಲಿ ಶಿಕ್ಷಕಿ ಇಂದಿರಾಕೊಪ್ಪದ ನಿರೂಪಿಸುವರು.ಕುಮಾರಿ.ಸೌಮ್ಯಕೆಂಪಣ್ಣನವರ ಸಂಗೀತ ಸೇವೆ ಒದಗಿಸುವರುಎಂದು ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿಕೂಡಲಮಠದಗುರುಮಹೇಶ್ವರ ಶಿವಾಚಾರ್ಯ ಸ್ವಾಮಿಗಳು, ಹೆರೂರನ ನಂಜುಂಡ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮಿಗಳು, ಹಿರಿಯ ನ್ಯಾಯವಾದಿ ಹಾಗೂ ಸಮೀತಿಯಅಧ್ಯಕ್ಷಎಸ್.ಎಸ್.ರಾಮಲಿಂಗಣ್ಣನವರ, ಸಿದ್ದಣ್ಣ ಚಿಕ್ಕಬಿದರಿ, ನಿತ್ಯಾನಂದಕುಂದಾಪುರ, ಶಿವಕುಮಾರ ಜಾಧವ ಸೇರಿದಂತೆ ಮತ್ತಿತರರುಇದ್ದರು.