ಡಿ. 4 ರಂದು ಶಾಲಾ ಮಕ್ಕಳಿಗೆ ತರಬೇತಿ


ಧಾರವಾಡ,ನ.11: ಡಿಸೆಂಬರ್ 4 ರಂದು ಸಾಕಾರ ಸಾಂಸ್ಕೃತಿಕ ಮತ್ತು ಮಾಧ್ಯಮ ಪ್ರತಿಷ್ಠಾನ ಧಾರವಾಡ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ಚಿತ್ರಕಲಾ ತರಬೇತಿ ಏರ್ಪಡಿಸಲಾಗಿದೆ ಎಂದು ಡಾ.ಶುಭುದಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಆರ್ಟ್ ಗ್ಯಾಲರಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಈ ಒಂದು ತರಬೇತಿ ಸಹಯೋಗವನ್ನು ಎಮ್.ಆರ್ ಬಾಳಿಕಾಯಿ ಆರ್ಟ್ ಗ್ಯಾಲರಿ ಸಂಸ್ಥೆ ವಹಿಸಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಹೆಸರು ನೊಂದಾಯಿಸಿಕೊಂಡು ತರಬೇತಿ ಪಡೆಯಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಾಗರತ್ನಾ ಹಡಗಲಿ, ಇಂದಿರಾ ಕುಲಕರ್ಣಿ, ಸುನೀಲ್ ಕುಲಕರ್ಣಿ, ಎಮ್ ಆರ್ ಬಾಳಿಕಾಯಿ ಸೇರಿದಂತೆ ಹಲವರು ಇದ್ದರು.