ಡಿ. 31 ರಿಂದ ಬೀದರ ದೂರದರ್ಶನ ಅಲ್ಪ ಪ್ರಸಾರಣಾ ಶಕ್ತಿ ಕೇಂದ್ರದಿಂದ ಸಂಪೂರ್ಣವಾಗಿ ಪ್ರಸಾರ ಸ್ಥಗಿತ

ಕಲಬುರಗಿ,ಡಿ.07:ಪ್ರಸಾರ ಭಾರತಿ ಮಂಡಳಿಯ ದೂರದರ್ಶನ ಮಹಾ ನಿರ್ದೇಶನಾಲಯದ ನಿರ್ಧಾರದಂತೆ ಬೀದರ ದೂರದರ್ಶನ ಅಲ್ಪ ಪ್ರಸಾರಣಾ ಶಕ್ತಿ ಕೇಂದ್ರವು (ಚಾನಲ್ 09, ಫ್ರಿಕ್ವೆನ್ಸಿ 203.25 MHz) 2021ರ ಡಿಸೆಂಬರ್ 31 ರಿಂದ ತನ್ನ ಪ್ರಸಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಿದ್ದು, ದೂರದರ್ಶನದ ವೀಕ್ಷಕರು ಇದಕ್ಕೆ ಗಮನಿಸಬೇಕೆಂದು ಕಲಬುರಗಿ ದೂರದರ್ಶನ ಕೇಂದ್ರದ ಅಸಿಸ್ಟಂಟ್ ಇಂಜಿನೀಯರ್‍ರಾದ ಜೆ.ಬಿ. ಚರಕಪಲ್ಲಿ ಅವರು ತಿಳಿಸಿದ್ದಾರೆ.