ಡಿ.31ರಂದು ಹಾರಕೂಡ ಶ್ರೀಮಠದಲ್ಲಿ ಸಂಜೆವಾಣಿ ಕ್ಯಾಲೆಂಡರ್ ಬಿಡುಗಡೆ

ಬೀದರ್: ಡಿ.29:ಈ ತಿಂಗಳ 31ರಂದು ಭಾನುವಾರ ಬೆಳಿಗ್ಗೆ 9.00 ಗಂಟೆಗೆ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸುಪ್ರಸಿದ್ಧ ಹಾರಕೂಡ ಹಿರೇಮಠ ಸಂಸ್ಥಾನದಲ್ಲಿ ಸಂಜೆವಾಣಿ ದಿನಪತ್ರಿಕೆ ಹೊರ ತಂದಿರುವ ಪಂಚಾಂಗ ಸಹಿತ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುವುದೆಂದು ಪತ್ರಿಕೆಯ ಉಪ ಸಂಪಾದಕರು ಹಾಗೂ ಕರ್ನಟಕ ಕಾರ್ಯನಿರತ ಪತ್ರಕರ್ತರ ಸಮಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಹಾರಕೂಡ ಹಿರೇಮಠ ಸಂಸ್ಥಾನದ ಪೂಜ್ಯರಾದ ಡಾ.ಚನ್ನವೀರ ಶಿವಾಚಾರ್ಯರು ಕ್ಯಾಲೆಂಡರ್ ಬಿಡುಗಡೆ ಮಾಡುವರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅದ್ಯಕ್ಷ ಡಿ.ಕೆ ಗಣಪತಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪತ್ರಿಕೆಗೆ ಜಾಹಿರಾತು ನೀಡಿ ಸಹಕರಿಸಿದ ತಾಳಂಪಳ್ಳಿ ಫೌಂಡೇಷನ್ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ಧನರಾಜ ತಾಳಂಪಳ್ಳಿ, ಕೃಷಿ ಪಂಡಿತ ಪ್ರಶಸ್ತಿ ಪುರಸ್ಕøತರಾದ ಸತೀಶ ಸ್ವಾಮಿ ಕುಂಟೆಸಿರ್ಸಿ, ವೀರ ಮಾಹೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಖಜಾಂಚಿ ಡಾ.ಪ್ರಭುಲಿಂಗ ಸ್ವಾಮಿ, ಉಪಾಧ್ಯಕ್ಷ ಶ್ರೀಕಾಂತ ಸ್ವಾಮಿ ಸೋಲಪುರ, ಅಖಿಲ ಭಾರತೀಯ ವೀರಶೈವ ಮಹಾಸಭೆ ಬೆಂಗಳೂರು ನಗರ ಘಟಕದ ಯುವ ಉಪಾಧ್ಯಕ್ಷ ಕಾರ್ತಿಕ ಮಠಪತಿ, ಪತ್ರಕರ್ತರಾದ ಮಹಾರುದ್ರ ಡಾಕುಳಗಿ, ಸಂತೋಷ ಚಟ್ಟಿ, ಸಂಜೆವಾಣಿ ಪತ್ರಿಕೆಯ ಹಿರಿಯ ವರದಿಗಾರ ನಾಗರಾಜ ಹೂವಿನಳ್ಳಿ, ಮಹೇಶ ತಳಕೇರಿ, ರಾಜೇಂದ್ರ ಗೋಖಲೆ, ವಿದ್ಯಾಸಾಗರ ಬೆಳಕೇರಿ ಹಾಗೂ ಇತರರು ಉಪಸ್ಥಿತರಿರುವರು. ಪತ್ರಿಕೆಯ ಸ್ಥಾನಿಕ ಸಂಪಾದಕರಾದ ಟಿ.ಗಣೇಶಕುಮಾರ ಅಧ್ಯಕ್ಷತೆ ವಹಿಸುವರು ಎಂದು ಶಿವಕುಮಾರ ಸ್ವಾಮಿ ಪ್ರಕಟಣೆಗೆ ತಿಳಿಸಿದ್ದಾರೆ.