ಡಿ. 30: ರೈತರೊಂದಿಗೆ ಕೇಂದ್ರದ ಮಾತುಕತೆ

ನವದೆಹಲಿ, ಡಿ.28- ಕೃಷಿಕರಿಗೆ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ನಾಳೆ ಮಾತುಕತೆ ನಡೆಸಲು ನಿರ್ಧರಿಸಿದ್ದ ಕೇಂದ್ರ ಸರ್ಕಾರ ಇದೀಗ ನಾಡಿದ್ದು ಮಾತುಕತೆ ನಡೆಸಲು ಉದ್ದೇಶಿಸಿದೆ.

ನಾಡಿದ್ದು ಮದ್ಯಾಹ್ನ 2 ಗಂಟೆಗೆ ರೈತರೊಂದಿಗೆ ಮಾತುಕತೆ ನಡೆಯಲಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.

ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ನೇತೃತ್ವದಲ್ಲಿ ರೈತ ಸಂಘಟನೆಗಳಿಗೆ ಮಾತುಕತೆ ನಡೆಯಲಿದೆ ಕಾಯ್ದೆ ಕುರಿತು ರೈತರಲ್ಲಿ ಇರುವ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಕೃಷಿ ಸಚಿವಾಲಯ ರೈತರಿಗೆ ಎರಡನೇ ಬಾರಿ ಪತ್ರ ಬರೆದು ನಿಮಗೆ ಸೂಕ್ತವಾದ ಸಮಯದಲ್ಲಿ ಮಾತುಕತೆಗೆ ಬನ್ನಿ ಎಂದು ಸೂಚಿಸಿದ್ದರಂತೆ ನಾಳೆ ಮಾತುಕತೆಗೆ ಸಮಯ ನಿಗದಿ ಮಾಡಲಾಗಿತ್ತು.
ಈಗ ಕೇಂದ್ರ ಕೃಷಿ ಸಚಿವಾಲಯ ಸ್ನೇಹಿತರೊಂದಿಗಿನ ಮಾತುಕತೆಯನ್ನು ಡಿಸೆಂಬರ್ 30 ಕ್ಕೆ ಮುಂದೂಡಿದೆ.

ಮೂರು ಕೃಷಿ ಕಾಯ್ದೆಗಳು ಕುರಿತಂತೆ ರೈತರಿಗಿರುವ ಅನುಮಾನಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಯಲಿದೆ ಎಂದು ಕೃಷಿ ಸಚಿವಾಲಯದ ಮೂಲಗಳು ತಿಳಿಸಿವೆ.

ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಕಳೆದ 32 ದಿನಗಳಿಂದ ದೆಹಲಿಯ ಗಡಿಭಾಗದಲ್ಲಿ 40ಕ್ಕೂ ಹೆಚ್ಚು ರೈತರು ಸಂಘಟನೆಗಳು ಹೋರಾಟ ನಡೆಸುತ್ತಿವೆ.

ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳೊಂದಿಗೆ ಈಗಾಗಲೇ ಐದು ಸುತ್ತಿನ ಮಾತುಕತೆ ನಡೆದಿದ್ದು 55 ಸುತ್ತಿನಲ್ಲಿ ಮಾತುಕತೆ ವಿಫಲ ವಾಗಿದೆ ಈಗ ಮತ್ತೊಂದು ಸುತ್ತಿನ ಮಾತುಕತೆ ಡಿಸೆಂಬರ್ 30ರಂದು ನಡೆಯಲಿದೆ.

ನಾಡಿದ್ದು ನಡೆಯಲಿರುವ ಮಾತುಕತೆಯ ಬಳಿಕ ರೈತರು ಪ್ರತಿಭಟನೆಯನ್ನು ಇನ್ ಪಡೆಯುವುದು ಇಲ್ಲವೆ ಮತ್ತು ತೀವ್ರಗೊಳಿಸಲು ನಿರ್ಧರವಾಗಲಿದೆ