ಡಿ. 30 ರಂದು “ವಸುಂಧರೋತ್ಸವ

ಶಿವಮೊಗ್ಗ. ಡಿ.೨೮; ಬರುವ ಡಿ.೩೯ ರಂದು ಡಾ. ಪವಿತ್ರರವರು ‘ರಸ ಋಷಿ ನಮನ’ ಎಂಬ ರಾಷ್ಟ್ರಕವಿ ಕುವೆಂಪು ವಿರಚಿತ ಕಾವ್ಯವನ್ನಾಧರಿಸಿದ ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ. ನೇರ ಹಿನ್ನೆಲೆ ಸಂಗೀತದಲ್ಲಿ ನಟ್ಟುವಾಂಗ ಮತ್ತು ನಿರೂಪಣೆಯಲ್ಲಿ ಡಾ.ಶುಭ್ರತಾ, ಗಾಯನದಲ್ಲಿ ವಿದುಷಿ ವಸುಧಾ, ಮೃದಂಗದಲ್ಲಿ ವಿದ್ವಾನ್ ವಿನಯ್ ನಾಗರಾಜನ್, ಕೊಳಲಿನಲ್ಲಿ ವಿದ್ವಾನ್ ರಾಕೇಶ್ ಸುಧೀರ್ ಮತ್ತು  ರಿದಂ ಪ್ಯಾಡ್‌ನಲ್ಲಿ ವಿದ್ವಾನ್ ಸ್ಕಂದ ಸಹಕರಿಸಲಿದ್ದಾರೆ.  ಡಿಸೆಂಬರ್ 29 ರ ಕುವೆಂಪು ಅವರ ಜನ್ಮದಿನದ ಪ್ರಯುಕ್ತ ಈ ಪ್ರಸ್ತುತಿ ನಡೆಯಲಿದೆ. ಮೈಸೂರಿನ ‘ನಾದಬ್ರಹ್ಮ ಸಂಗೀತ ಸಭಾ’ದ ಸಭಾಂಗಣದಲ್ಲಿ ಈ ಶಾಸ್ತ್ರೀಯ ನೃತ್ಯ ಮಹೋತ್ಸವವು ಡಿಸೆಂಬರ್ 30 ರ ಬುಧವಾರ ಸಂಜೆ 7.30 ಕ್ಕೆ ನಡೆಯಲಿದೆ.