ಡಿ.30ರಂದು ಡಾ|| ವಿಷ್ಣು ಪುಣ್ಯಸ್ಮರಣೆ : ಕ್ಯಾಲೆಂಡರ್, ದೀಪಾಂಜಲಿ ಕೃತಿ ಬಿಡುಗಡೆ

ಬಳ್ಳಾರಿ.ಡಿ.26: ಡಾ|| ವಿಷ್ಣುವರ್ಧನ್‍ರವರ 11ನೇ ಪುಣ್ಯಸ್ಮರಣೆ ನಿಮಿತ್ತ ನಗರದ ಹಳೆ ಬಸ್ ನಿಲ್ದಾಣದ ಎದುರಗಡೆ ಕೋಲಾಚಲಂ ಕಾಂಪೌಂಡ್‍ನಲ್ಲಿರುವ ನ್ಯೂ ಗಣೇಶ್ ಹೊಟೆಲ್ ಸಭಾಂಗಣದಲ್ಲಿ ಡಿ.30ರಂದು ಮುಂಜಾನೆ 11 ಗಂಟೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ದೆಹಲಿ ಕನ್ನಡಿಗ ವಿಶ್ವನಾಥ್‍ರವರ ದೀಪಾಂಜಲಿ ಕಥಾ ಸಂಕಲನ ಮತ್ತು 2021ರ ಕೋಟಿಗೊಬ್ಬ ಕ್ಯಾಲೆಂಡರ್ ಬಿಡುಗಡೆ ಮಾಡಿ ಸ್ಥಳೀಯ ಅಸ್ಪತ್ರೆಯಲ್ಲಿ ಹಣ್ಣು ಮತ್ತು ಔಷಧಿಯನ್ನು ವಿತರಿಸಲಾಗುವುದು ಎಂದು ಡಾ.ವಿಷ್ಣು ಸೇನಾ ಸಮಿತಿಯ ಜಿಲ್ಲಾಧ್ಯಕ್ಷರು, ಪಂಪಾಪತಿ.ತಿ.ಎಮ್, ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಡಾ|| ವಿಷ್ಣು ಸೇನಾ ಸಮಿತಿಯ ಜಿಲ್ಲಾ ಹಾಗೂ ತಾಲೂಕಾ ಪದಾಧಿಕಾರಿಗಳು ಮತ್ತು ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಲು ಕೋರಿದ್ದಾರೆ.
ಕೋಟಿಗೊಬ್ಬ ಕ್ಯಾಲೆಂಡರ್ ಸರಣಿ ಶುರುವಾಗಿ 2021ಕ್ಕೆ 10 ವರ್ಷವಾಯಿತು. ದಿ|| ಅನಂತಕುಮಾರ್ ಮತ್ತು ಡಾ.ಭಾರತಿ ವಿಷ್ಣುವರ್ಧನ್ ಅವರು ಈ ಕ್ಯಾಲೆಂಡರ್ ಸರಣಿಯ ಮೊದಲನೇ ಸಂಚಿಕೆಯನ್ನು ಬಿಡುಗಡೆಗೊಳಿಸಿದ್ದರು. ಅಂದಿನಿಂದ ಇಂದಿನವರೆಗೆ ಹತ್ತು ವರ್ಷಗಳ ಕಾಲ ಡಾ.ವಿಷ್ಣುವರ್ಧನ್ ಅವರ ಅಭಿಮಾನಿಗಳ ಮನೆಮನದ ಮಾತಾಗಿದೆ ಈ ಕ್ಯಾಲೆಂಡರ್ ಎಂದು ಪಂಪಾಪತಿ ತಿಳಿಸಿದ್ದಾರೆ.