ಡಿ. 30ರಂದು ಕುವೆಂಪು ಜನ್ಮದಿನಾಚರಣೆ: ಸಾಧಕರಿಗೆ ಪ್ರಶಸ್ತಿ ಪ್ರದಾನ

ಕಲಬುರಗಿ:ಡಿ.27: ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಡಿಸೆಂಬರ್ 30ರಂದು ಬೆಳಿಗ್ಗೆ 11-30ಕ್ಕೆ ರಾಷ್ಟ್ರಕವಿ ಕುವೆಂಪು ಅವರ 119ನೇ ಜನ್ಮದಿನಾಚರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕುವೆಂಪುರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜೈ ಕನ್ನಡಿಗರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಸಚಿನ್ ಎಸ್. ಫರತಾಬಾದ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿವ್ಯ ಸಾನಿಧ್ಯವನ್ನು ಶ್ರೀನಿವಾಸ್ ಸರಡಗಿಯ ರೇವಣಸಿದ್ಧ ಶಿವಾಚಾರ್ಯರು, ನದಿಸಿನೂರಿನ ಗುರುರಾಜೇಂದ್ರ ಶಿವಯೋಗಿಗಳು, ಅಧ್ಯಕ್ಷೆಯನ್ನು ಸಹರಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎ. ಸಿದ್ದಿಕಿ ಅವರು ವಹಿಸುವರು ಎಂದರು.
ಉದ್ಘಾಟನೆಯನ್ನು ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ನೆರವೇರಿಸುವರು. ಸುರೇಶ್ ಬಡಿಗೇರ್ ಅವರು ವಿಶೇಷ ಭಾಷಣಕಾರರಾಗಿ, ಮುಖ್ಯ ಅತಿಥಿಗಳಾಗಿ ಪಾಲಿಕೆ ಸದಸ್ಯ ಪ್ರಕಾಶ್ ಕಪನೂರ್, ಕಾಂಗ್ರೆಸ್ ಮುಖಂಡ ಶ್ಯಾಮ್ ನಾಟೀಕಾರ್, ನ್ಯಾಯವಾದಿ ಪಿ.ಎನ್. ಕಪನೂರ್, ಬಿಜೆಪಿ ಯುವ ಮುಖಂಡ ಲಕ್ಷ್ಮಣ್ ಮೂಲಭಾರತಿ, ಸಂತೋಷ್ ಹಾದಿಮನಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಬಸವರಾಜ್ ಬಿರಬಟ್ಟೆ, ಸನ್‍ರೈಸ್ ಆಸ್ಪತ್ರೆ ಮುಖ್ಯ ಆಡಳಿತಾಧಿಕಾರಿ ರಾಜಕುಮಾರ್ ಆರ್., ಕಾಂಗ್ರೆಸ್ ಮಹಿಳಾ ಮುಖಂಡರಾದ ಶ್ರೀಮತಿ ಅಮಿನಾ ಪಟೇಲ್ ಅವರು ಆಗಮಿಸುವರು ಎಂದು ಅವರು ಹೇಳಿದರು.
ಕುವೆಂಪು ಅವರ ಭಾವಚಿತ್ರಕ್ಕೆ ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ, ರಾಜ್ಯ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ್ ಗುತ್ತೇದಾರ್ ಅವರು ಪೂಜೆ ಮಾಡುವರು. ಪ್ರಶಸ್ತಿಗಳನ್ನು ಮಹಾಪೌರ ವಿಶಾಲ್ ದರ್ಗಿ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಅಜ್ಮಲ್ ಗೋಲಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೆಂಗಟಿ ಅವರು ಪ್ರದಾನ ಮಾಡುವರು ಎಂದು ಅವರು ತಿಳಿಸಿದರು.
ಕಾದಂಬರಿಕರ ಡಾ. ಲಕ್ಷ್ಮಣ್ ಕೌಂಟೆ, ಕಥೆಗಾರ ಸಿದ್ಧರಾಮ್ ಹೊನಕಲ್, ಸಾಹಿತಿ ಡಾ. ಸೂರ್ಯಕಾಂತ್, ವಾಗ್ಮಿ ಜಗನ್ನಾಥ್ ತರನಳ್ಳಿ, ಶಿಕ್ಷಕಿಯರಾದ ಶ್ರೀಮತಿ ಜಯದೇವಿ ಠವಂಟಿ, ಶ್ರೀಮತಿ ನಂದಿನಿ ಸನ್‍ವಾಲ್, ಸಂಗೀತಗಾರ ಸಿ.ಎಸ್. ಮಾಲಿಪಾಟೀಲ್, ಸಾಹಿತಿ ಡಾ. ಗಂಗಾಧರ್ ಬಡಿಗೇರ್, ಪ್ರಿನ್ಸಿಪಾಲ್ ಡಾ. ಶರಣಬಸಪ್ಪ ವಡ್ಡನಕೇರಿ, ಕಲಾವಿದ ಗೋಪಾಲ್ ಕುಲಕರ್ಣಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸುರೇಶ್ ಹನಗುಡಿ, ಅಕ್ಷಯ್, ನವೀನ್, ಪ್ರವೀಣ್ ಸಿಂಧೆ, ಅಂಬು ಮಸ್ಕಿ, ಸಾಯಿಕುಮಾರ್ ಮುಂತಾದವರು ಉಪಸ್ಥಿತರಿದ್ದರು.