ಡಿ.3 ವೇದ ಚಿತ್ರದ ಗ್ಯಾಂಡ್ ಪ್ರೀ ರಿಲೀಸ್ ಇವೆಂಟ್‌ ಆಯೋಜನೆ,ನಗರಕ್ಕೆ ಡಾ.ಶಿವರಾಜ್‌ಕುಮಾರ ಆಗಮನ

ರಾಯಚೂರು, ನ.12 – ಕರುನಾಡ ಚಕ್ರವರ್ತಿ ಡಾ.ಶಿವರಾಜ್‌ಕುಮಾರ್ ಅಭಿನಯದ 125ನೇ ಚಲನಚಿತ್ರ ವೇದ ಚಿತ್ರದ ಗ್ಯಾಂಡ್ ಪ್ರೀ ರಿಲೀಸ್ ಇವೆಂಟ್‌ನ್ನು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸಂಜೆ ೫ ಗಂಟೆಗೆ ಆಯೋಜಿಸಲಾಗಿದೆ ಎಂದು ಶೋ ಆಯೋಜಕ ಡಾ.ವೀರೇಂದ್ರ ಜಾಲ್ದಾರ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ವೇದ ಚಿತ್ರ ಕಿರು ಪರಿಚಯ ವಿಡಿಯೋ ತುಣುಕೊಂದನ್ನು ಪ್ರದರ್ಶಿಸಿ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಡಾ. ಶಿವರಾಜ್ ಕುಮಾರ ಹಾಗೂ ಎ.ಹರ್ಷ ಅವರ ಜೋಡಿಯಲ್ಲಿ ಗೀತಾ ಪಿಕ್ರ‍್ಸ್ ಅರ್ಪಿಸುವ ವೇದಾ ಚಿತ್ರದ ಗ್ಯಾಂಡ್ ಪ್ರೀ ರಿಲೀಸ್ ಇವೆಂಟ್‌ನ್ನು ಅದ್ದೂರಿಯಾಗಿ ನಡೆಸಲು ವಿ.ಜೆ. ಇಂಟರ್‌ನ್ಯಾಷನಲ್ ಪ್ರೋಡಕ್ಷನ್ ನವರು ಆಯೋಜಿಸುತ್ತಿದ್ದು ಡಿ.೩ ರಂದು ಈ ಶೋ ನ ಪ್ರಮುಖ ಆಕರ್ಷಣೆಯಾಗಿ ಡಾ. ಶಿವರಾಜ್ ಕುಮಾರ ಭಾಗವಹಿಸಲಿದ್ದು,ವಿವಿಧ ಕಲಾತಂಡಗಳು ಪ್ರದರ್ಶನದಲ್ಲಿ ಭಾಗಿಯಾಗಲಿವೆ ಎಂದರು.

ಡಾ.ಶಿವರಾಜ್ ಕುಮಾರ್ ಅವರು ವೇದಿಕೆಯ ಮೇಲೆ ೧೯೮೬ ರಲ್ಲಿ ತಾವು ಅಭಿನಯಿಸಿದ ಮೊದಲ ಚಿತ್ರ ಆನಂದ ದಿಂದ ಹಿಡಿದು ವೇದ ವರೆಗಿನ 125 ಚಿತ್ರಗಳ ನೃತ್ಯವನ್ನು ಪ್ರದರ್ಶನ ಮಾಡಲಿದ್ದಾರೆ ಎಂದುರು. 

೨೦೨೨ ಕನ್ನಡ ಚಲನಚಿತ್ರರಂಗಕ್ಕೆ ಸುವರ್ಣ ಯುಗ ಎಂದೇ ಹೇಳಬೇಕು.ಕೆಜಿಎಫ್ -೨ ೧೨೦೦ ಕೋಟಿಗಳಿಗೆ ಮಾಡಿತು. ಜೇಮ್ಸ್ ಜನರ ಮನ ಗೆದ್ದಿತು.ಗಂಧದಗುಡಿ ಇನ್ನು ಪ್ರದರ್ಶನಗೊಳ್ಳುತ್ತಿದೆ. ಕಾಂತಾರ ಸದ್ದು ಮಾಡುತ್ತಿದೆ.ಹೀಗಾಗಿ ಇಡೀ ಚಿತ್ರರಂಗವೇ ಕನ್ನಡ ಸಿನಿಮಾ ರಂಗದತ್ತ ಚಿತ್ತ ನೆಡುವಂತೆ ಮಾಡಿದೆ ಎಂದುರು.

ರಾಯಚೂರು ಕಲಾವಿದರನ್ನು ಇಷ್ಟಪಡುವ ಊರು.ಇಲ್ಲಿನ ಪ್ರತಿಭೆಗಳಿಗೂ ಅವಕಾಶ ಕಲ್ಪಿಸಲು ವಿ.ಜೆ. ಇಂಟರ್‌ನ್ಯಾಷನಲ್ ಪ್ರೋಡಕ್ಷನ್ ಹಲವು ಪ್ರಯತ್ನಗಳನ್ನು ಮಾಡಿದೆ.ನನ್ನ ೩೦ ವರ್ಷದಲ್ಲಿ ಇದು 600 ನೇ ಪ್ರದರ್ಶನವಾಗಿದೆ.ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ. ೨೦ಸಾವಿರ ಜನ ಸೇರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.