ಡಿ. 3 ರಂದು ಹೂಗಾರ ಮಾದಯ್ಯನವರ ಜಯಂತಿಗೆ ಸಕಲ ಸಿದ್ಧತೆ

ಅಫಜಲಪುರ: ನ.27:ಸಮಾಜದಲ್ಲಿ ಸಮಾನತೆಗಾಗಿ ಶ್ರಮಿಸಿದ 12ನೇ ಶತಮಾನದ ಬಸವಾದಿ ಪ್ರಮಥರಲ್ಲಿ ಒಬ್ಬರಾದ ಶರಣ ಹೂಗಾರ ಮಾದಯ್ಯನವರ ಜಯಂತಿಯನ್ನು ಈ ಬಾರಿ ಸರಳವಾಗಿ ಅತ್ಯಂತ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಜಿಲ್ಲಾ ಅಧ್ಯಕ್ಷ ಪ್ರಕಾಶ ಫುಲಾರಿ ತಿಳಿಸಿದರು.

ಡಿ. 3 ರಂದು ಕಲಬುರಗಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ 12 ನೇ ಶತಮಾನದ ಬಸವಾದಿ ಶರಣ ಹೂಗಾರ ಮಾದಯ್ಯನವರ ಜಯಂತ್ಯುತ್ಸವ ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಸನ್ಮಾನ ಸಮಾರಂಭದ ಹಿನ್ನೆಲೆ ಅಫಜಲಪುರ ಪಟ್ಟಣಕ್ಕೆ ಜಿಲ್ಲಾ ಪದಾಧಿಕಾರಿಗಳೊಂದಿಗೆ ಆಗಮಿಸಿ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು ಹಿಂದುಳಿದ ಹೂಗಾರ ಸಮಾಜವು ಕಾಯಕವೇ ಕೈಲಾಸ ಎಂಬ ಶರಣರ ನುಡಿಯನ್ನು ಪರಿಪಾಲಿಸುತ್ತಾ ಬಂದಿದೆ. ಎಲ್ಲ ಸ್ಥರಗಳಿಂದ ಹಿಂದುಳಿದ ಹೂಗಾರ ಸಮಾಜವು ಸಮಾಜದ ಮುಖ್ಯ ವಾಹಿನಿಗೆ ಬರಲು ಮೊದಲು ನಮ್ಮ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕು ಹಾಗೂ ನಮ್ಮ ಸಮಾಜದ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಪೂರೈಸಬೇಕು ಎಂಬ ನಿಟ್ಟಿನಲ್ಲಿ ಡಿ. 3ರಂದು ಹೂಗಾರ ಮಾದಯ್ಯನವರ ಜಯಂತಿಯ ದಿನದಂದು ನಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಅಂದಿನ ಸಮಾರಂಭಕ್ಕೆ ನಾಡಿನ ಪೂಜ್ಯರು, ಜನಪ್ರತಿನಿಧಿಗಳು, ಅನೇಕ ಗಣ್ಯಮಾನ್ಯರು ಆಗಮಿಸಲಿದ್ದಾರೆ. ಸಾವಿರಾರು ಜನ ಭಾಗಿಯಾಗುವ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಅಫಜಲಪುರ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೂಗಾರ ಸಮಾಜದ ಬಂಧುಗಳು ಹಾಗೂ ಹಿತೈಷಿಗಳು ಆಗಮಿಸಿ ಸಮಾರಂಭವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸಂಘದ ತಾಲೂಕು ಗೌರವಾಧ್ಯಕ್ಷ ರೇವಣಸಿದ್ಧ ಹೂಗಾರ ಮಾತನಾಡಿ, ಶರಣ ಹೂಗಾರ ಮಾದಯ್ಯನವರ ಜಯಂತಿಯ ಯಶಸ್ಸಿಗಾಗಿ ನಮ್ಮ ತಾಲೂಕಿನಿಂದ ಅಗತ್ಯ ಸಹಕಾರ ನೀಡಲಾಗುವುದು ಮತ್ತು ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೂಗಾರ ಸಮಾಜದ ಬಂಧುಗಳನ್ನು ಕರೆ ತರುವುದಾಗಿ ತಿಳಿಸಿದರು.

ಸಭೆಯಲ್ಲಿ ಗುರುದೇವ ಶರಣರು, ದತ್ತು ಹೂಗಾರ, ಹರೀಶ ಹೂಗಾರ, ಶಿವರಾಯ ಹೂಗಾರ, ಬಸವರಾಜ ಹೂಗಾರ, ಶಿವಾನಂದ ಹೂಗಾರ, ಶಿವಲಿಂಗ ಹೂಗಾರ, ಜಗು ಹೂಗಾರ, ಸಿದ್ದೇಶ್ವರ ಹೂಗಾರ, ಪುಟ್ಟು ಹೂಗಾರ, ಪ್ರವೀಣ ಹೂಗಾರ, ರಾಜೇಶ ಹೂಗಾರ, ಅರುಣಕುಮಾರ ಹೂಗಾರ ಸೇರಿದಂತೆ ಅನೇಕರಿದ್ದರು.