ಡಿ.3 ರಂದು ಜೇವರ್ಗಿ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಕೆ ಎಸ್ ನಾಯಕ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಡಾ.ಅಜಯಸಿಂಗ್: ಎಸ್ ಕೆ ಬಿರಾದಾರ

ಜೇವರ್ಗಿ: ನ.5:ಡಿಸೆಂಬರ್ 3ರಂದು ನಡೆಯಲಿರುವ ಜೇವರ್ಗಿ ಕನ್ನಡ ಸಾಹಿತ್ಯ ಪರಿಷತ್ತು 7ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡದ ತೇರನ್ನು ಎಳೆಯಲಿಕ್ಕೆ ಸರ್ವಾಧ್ಯಕ್ಷರಾಗಿ ಖ್ಯಾತ ಸಾಹಿತಿ ಹಾಗೂ ನಿವೃತ್ತ ಪ್ರಾಚಾರ್ಯ ಕೆ ಎಸ್ ನಾಯಕ ಬದನಿಹಾಳರವರು ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಸರ್ಕಾರದ ವಿರೋಧ ಪಕ್ಷದ ಮುಖ್ಯ ಸಚೇತಕ ಮತ್ತು ಶಾಸಕ ಡಾ.ಅಜಯಸಿಂಗ್ ಆಯ್ಕೆಯಾಗಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎಸ್ ಕೆ ಬಿರಾದಾರ ಹೇಳಿದರು.

ಪಟ್ಟಣದ ಗುರುಕುಲ ಶಾಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಸಾಪ ಪದಾಧಿಕಾರಿಗಳು, ಡಿಸೆಂಬರ್ 3ರಂದು ಜೇವರ್ಗಿಯಲ್ಲಿ ಬಹಳ ಸಾಂಸ್ಕøತಿಕ ಮೆರಗುನೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತು ಜೇವರ್ಗಿ ವತಿಯಿಂದ ಅದ್ದೂರಿಯಾಗಿ ನಡೆಯಲಿದ್ದು ಈ ಸಮ್ಮೇಳನಕ್ಕೆ ಖ್ಯಾತ ಸಾಹಿತಿಗಳು ಹಾಗೂ ನಿವೃತ್ತ ಪ್ರಾಚಾರ್ಯ ಕೆ ಎಸ್ ನಾಯಕ ಸರ್ವಾಧ್ಯಕ್ಷರನ್ನಾಗಿ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಶಾಸಕ ಡಾ.ಅಜಯಸಿಂಗ್ ಆಯ್ಕೆಯಾಗಿದ್ದಾರೆ.

ಈ ಕನ್ನಡಮ್ಮನ ಜಾತ್ರೆಯಲ್ಲಿ ಜಾನಪದ ಸಾಹಿತ್ಯ ಬಿಂಬಿಸುವ ಕಲಾ ತಂಡಗಳು, ವೀರಗಾಸೆ, ಕರಡಿ ಕುಣಿತ ಸೇರಿದಂತೆ ಸುಮಾರು 20ಕ್ಕೂ ಅಧಿಕ ಕಲಾ ತಂಡಗಳು ಭಾಗಿಯಾಗಿ ನಮ್ಮ ನಾಡು,ನುಡಿಯ ಪ್ರತಿಬಿಂಬ ಬಿತ್ತರಿಸಲಿದ್ದು, ಈ ಸಮ್ಮೇಳನಕ್ಕೆ ಡಾ.ನಾ ಸೋಮಶೇಖರ್ ಹಾಗೂ ಟಿ ಎಸ್ ನಾಗಾಭರಣರವರು ಆಗಮಿಸಲಿದ್ದಾರೆ. ಪದ್ಮಶ್ರೀ ಮಂಜಮ್ಮ ಜೊಗತಿರವರು ಸಹ ಆಗಮಿಸುವ ಸಂಭವ ಇದೆ ಎಂದು ಕಸಾಪ ಪದಾಧಿಕಾರಿಗಳು ತಿಳಿಸಿದರು.

ಈ ಕನ್ನಡ ಜಾತ್ರೆ ನಿಮಿತ್ಯ ಸ್ಮರಣ ಸಂಚಿಕೆ ಸಹ ಬಿಡುಗಡೆಯಾಗಲಿದ್ದು ಈ ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕರಾಗಿ ಸಾಹಿತಿ ಡಾ.ಶರಣಗೌಡ ಪಾಟೀಲ್ ಜೈನಾಪುರ ಸಂಪಾದಕರಾಗಿ ಪತ್ರಕರ್ತ ಧನರಾಜ್ ರಾಠೋಡ ಮುತ್ತಕೋಡ, ಡಾ.ಧರ್ಮಣ್ಣ ಬಡಿಗೇರ, ಸುನಂದಾ ಕಲ್ಲಾ ಹಾಗೂ ಮಹಾಂತೇಶ ಪಾಟೀಲ್ ರವರ ನೇತೃತ್ವದಲ್ಲಿ ಸಂಪಾದಕೀಯ ಮಂಡಳಿಯು ನಮ್ಮ ಜೇವರ್ಗಿ ತಾಲೂಕಿನ ಗತ ವೈಭವದ ಮೆರಗನ್ನು ನೀಡಲಿದ್ದಾರೆ.

ವಚನಕಾರರ,ತತ್ವ ಪದಕಾರರ ಕವಿಗೋಷ್ಠಿ ಸಹ ನಡೆಯಲಿದೆ. ಅಲ್ಲದೇ 7ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಲವು ದ್ವಾರ ಬಾಗಿಲುಗಳು, ಮಹಾದ್ವಾರ ಮತ್ತು ಹಣಕಾಸು ಸಮಿತಿ, ಆಹಾರ ಸಮಿತಿ, ಮೆರವಣಿಗೆ ಸಮಿತಿ ಮತ್ತು ಪ್ರಚಾರ ಸಮಿತಿ ಸಹ ಇರಲಿದ್ದು,ಈ ಸಮ್ಮೇಳನಕ್ಕೆ ಖ್ಯಾತ ಹಾಸ್ಯಗಾರ್ತಿ ಇಂದುಮತಿ ಸಾಲಿಮಠ,ಲೂಯಿಸ್ ಮತ್ತು ಡಾ.ಶರಣು ಗದ್ದುಗೆರವರು ಸಾಕ್ಷಿಯಾಗುವವರು.
7ನೇ,ಕನ್ನಡ ಸಾಹಿತ್ಯ ಸಮ್ಮೇಳನವು ಬಹು ವಿಜೃಂಭಣೆಯಿಂದ ನಡೆಯಲಿದ್ದು, ಜೇವರ್ಗಿ ತಾಲೂಕಿನಲ್ಲಿ ನಡೆಯುವ ಸಮ್ಮೇಳನವು ರಾಜ್ಯಮಟ್ಟದಲ್ಲಿ ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಕಸಾಪ ಪದಾಧಿಕಾರಿಗಳು ಗೋಷ್ಠಿಯಲ್ಲಿ ಹೇಳಿದರು.

ಈ ಸುದ್ದಿಗೋಷ್ಠಿಯಲ್ಲಿ ಕಸಾಪ ಅಧ್ಯಕ್ಷ ಎಸ್ ಕೆ ಬಿರಾದಾರ, ಗೌರವ ಅಧ್ಯಕ್ಷ ಚನ್ನಮಲ್ಲಯ್ಯ ಹಿರೇಮಠ, ಕಲ್ಯಾಣಕುಮಾರ ಸಂಗಾವಿ ಗಂವ್ಹಾರ, ಶ್ರೀಹರಿ ಕರಕಿಹಳ್ಳಿ, ಡಾ.ಧರ್ಮಣ್ಣ ಬಡಿಗೇರ, ಧನರಾಜ್ ರಾಠೋಡ ಮುತ್ತಕೋಡ, ಡಾ.ಹಣಮಂತ್ರಾಯ ರಾಂಪೂರೆ, ಎಸ್ ಟಿ ಬಿರಾದಾರ, ಬಸವರಾಜ ಬಾಗೆವಾಡಿ,ಚಂದ್ರಶೇಖರ ತುಂಬಗಿ,ಸುನಂದಾ ಕಲ್ಲಾ,ಬಸಮ್ಮ ಹೂಗಾರ,ಸುರೇಶ್ ಹಿರೇಮಠ ಸೇರಿದಂತೆ ಅನೇಕರು ಇದ್ದರು.


ಸರ್ವಾಧ್ಯಕ್ಷರ ಪರಿಚಯ

ಕೆ ಎಸ್ ನಾಯಕರವರು ಕಲಬುರಗಿ ಜಿಲ್ಲೆಯ ಜೇವರ್ಗಿಯ ತಾಲೂಕಿನ ಕೊನೆಯ ಹಳ್ಳಿ ಬದನಿಹಾಳ ಗ್ರಾಮದವರು.ನಾಯಕರವರು 1954 ಅಗಸ್ಟ್ 1ರಂದು ಜನ್ಮ ತಾಳಿದರು. ಇವರು ಸಿಂದಗಿ ತಾಲ್ಲೂಕಿನ ಎಚ್ ಜಿ ಶಾಲೆಯಲ್ಲಿ ಪ್ರೌಡ ಶಿಕ್ಷಣ, ಜಿ ಪಿ ಪೆÇೀರವಾಲ ಕಾಲೇಜಿನ ಸ್ನಾತಕ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ. ಧಾರವಾಡ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ.ಶ್ರೀಯುತರು ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಕಲಾ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ1980ರಿಂದ 2014ರವರೆಗೆ ಪ್ರಾಚಾರ್ಯ ವೃತ್ತಿಯಿಂದ ನಿವೃತ್ತರಾದರು.ನಾಯಕರವರು ಸಮಾರು 36 ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಇವರ ರಚಿಸಿದ ಕೃತಿಗಳು ಗುಲಬರ್ಗಾ ವಿಶ್ವವಿದ್ಯಾಲಯವು ಪದವಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿವೆ.
ಇವರ ಪ್ರಮುಖ ಕೃತಿಗಳು:ಲದೇಣಿಯಾ, ಕತ್ತಲ ಕರಗುವ ಪರಿ,ಲಚುಮಿ ಅತ್ತೆ,ವಲಸೆ ಹಕ್ಕಿಯ ಹಾಡು.ಆಯ್ದ ಲಲಿತ ಪ್ರಬಂಧಗಳು, ಕಥಾ ಸಂಗಮ.ಇವರ ಹಲವು ಲೇಖನ ಕೃತಿಗಳಿಗೆ ಹಲವು ಸಂಘ ಸಂಸ್ಥೆಗಳು ಗೌರವ ಸಲ್ಲಿಸಿ ಸನ್ಮಾನಿಸಿದ್ದಾರೆ.ಪ್ರಜಾವಾಣಿ, ಮಯೂರ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಮೂಡಿಬಂದ ಲೇಖನಗಳಿಗೆ ಪ್ರಶಸ್ತಿಗಳು ಲಭಿಸಿವೆ.ಕೆ ಎಸ್ ನಾಯಕರವರು ಈ ಹಿಂದೆ ಜೇವರ್ಗಿ ತಾಲೂಕಿನ ಅರಳಗುಂಡಗಿಯಲ್ಲಿ ವಲಯ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದರು.