ಡಿ.29, ಗ್ರಾ.ಪಂ.ಮರುಚುನಾವಣೆ

ದಾವಣಗೆರೆ ಡಿ.25- ದಾವಣಗೆರೆ ತಾಲ್ಲೂಕು ಹೆಬ್ಬಾಳು ಗ್ರಾಮ ಪಂಚಾಯಿತಿಯ ಹೆಬ್ಬಾಳು-1ಮತ್ತು ಹೆಬ್ಬಾಳು-2 ಮತಕ್ಷೇತ್ರಗಳಿಗೆ ಮರುಮತದಾನ ಡಿ,29ರಂದು ನಡೆಯಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗ ಈ ಕುರಿತು ಆದೇಶ ಮಾಡಿದ್ದು ಮತದಾರರ ಪಟ್ಟಿಯನ್ನು ಸರಿಪಡಿಸಿಕೊಂಡು ಆಯೋಗದ ನಿರ್ದೇಶನದಂತೆ ಈ ಎರಡೂ ಕ್ಷೇತ್ರಗಳ ಮತಗಟ್ಟೆ ಸಂಖ್ಯೆ 108 ಮತ್ತು 109 ಕ್ಕೆ ಬೆಳಿಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದ್ದು,ಮತದಾರರ ಎಡಗೈ ಹೆಬ್ಬೆರಳಿಗೆ ಅಳಿಸಲಾಗದ ಶಾಯಿ ಗುರುತು ಮಾಡಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.