ಡಿ. 27 ಜೆಡಿಎಸ್ ಪಂಚರತ್ನ ಯಾತ್ರೆ

ಚಿಕ್ಕಬಳ್ಳಾಪುರ, ನ.೨೫- ಇದೇ ತಿಂಗಳ ನ. ೨೭ರ ಭಾನುವಾರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಮಹತ್ವಕಾಂಕ್ಷಿ ಪಂಚರತ್ನ ರಥ ಯಾತ್ರೆಯ ಸಂಚರಿಸಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ ಹೇಳಿದರು.
ಅವರು ಕ್ರಮವನ್ನು ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ ಬಡವರಿಗೆ ವಸತಿ ಆರೋಗ್ಯ ವಿದ್ಯಾಭ್ಯಾಸ ಯುವಕರಿಗೆ ಉದ್ಯೋಗ, ರೈತರ ಚೈತನ್ಯಕ್ಕಾಗಿ ಪಂಚರತ್ನ ಯೋಜನೆ ರಥಯಾತ್ರೆ ಮಾಡಲಾಗುತ್ತಿದೆ ಸಾರ್ವಜನಿಕರು ಜೆ.ಡಿ.ಎಸ್.ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಬೇಕೆಂದಅವರು ಮನವಿ ಮಾಡಿದ್ದಾರೆ.
ನ. ೨೭ರ ಭಾನುವಾರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಮಹತ್ವಕಾಂಕ್ಷಿ ಪಂಚರತ್ನ ರಥ ಯಾತ್ರೆಯು ಸಂಚರಿಸಲಿದ್ದು ಅಂದು ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಹೋಬಳಿಯ ಪೆರೇಸಂದ್ರ ಗ್ರಾಮದಲ್ಲಿ ಸಂಚರಿಸಲಿದ್ದು ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ, ಸಿಎಂ ಇಬ್ರಾಹಿಂ ಸೇರಿದಂತೆ ಪಕ್ಷದ ಅನೇಕ ಮುಖಂಡರ ಜೊತೆಗೂಡಿ ಮಾಜಿ ಶಾಸಕ ಜೆಡಿಎಸ್ ಪಕ್ಷದ ಧುರೀಣ ಕೆ.ಪಿ.ಬಚ್ಚೇಗೌಡ ಸೇರಿದಂತೆ ಪಕ್ಷದ ವಿವಿಧ ಗಣ್ಯರು ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ ಎಂದು ಅವರು ನೀಡಿರುವ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.