ಡಿ-27 ಕ್ಕೆ ಕಲಾಕುಂಚ ದಿನದರ್ಶಿಕೆ ಲೋಕಾರ್ಪಣೆ

ದಾವಣಗೆರೆ.ಡಿ.೨೩; ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿಯಲ್ಲಿರುವ ವಿಶ್ವಗುರು ಭಾರತ ಪ್ರತಿಷ್ಠಾನದ ಪ್ರೇರಣಾ ಮಕ್ಕಳ ಆರೈಕೆ ಕೇಂದ್ರ ಮತ್ತು ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ 2020ನೇ ಡಿಸೆಂಬರ 27 ರಂದು ಬೆಳಿಗ್ಗೆ 11-35 ಕ್ಕೆ 2021ನೇ ವರ್ಷದ ಕಲಾಕುಂಚ ದಿನದರ್ಶಿಕೆ (ಕ್ಯಾಲೆಂಡರ್) ಲೋಕಾರ್ಪಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ವಾಮದೇವಪ್ಪ ದಿನದರ್ಶಿಕೆ ಲೋಕಾರ್ಪಣೆ ಮಾಡಲಿದ್ದು, ಸಮಾರಂಭದ  ಅಧ್ಯಕ್ಷತೆಯನ್ನು ವಿಶ್ವಗುರು ಭಾರತ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಶಿವಕುಮಾರ ಮೇಗಳಮನಿ ವಹಿಸಿಕೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಕಲಾಕುಂಚ ಡಿ.ಸಿ.ಎಂ. ಶಾಖೆಯ ಅಧ್ಯಕ್ಷರಾದ ಶಾರದಮ್ಮ ಶಿವನಪ್ಪ ಆಗಮಿಸಲಿದ್ದಾರೆ ಎಂದು ವಿಶ್ವಗುರು ಭಾರತ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶಂಭುಲಿಂಗ ಹೊಸಮನಿ ತಿಳಿಸಿದ್ದಾರೆ.ದಾವಣಗೆರೆ ತಾಲ್ಲೂಕು, ದೊಡ್ಡಬಾತಿಯ ವಿಶ್ವಗುರು ಭಾರತ ಪ್ರತಿಷ್ಠಾನದ ಪ್ರೇರಣಾ ಮಕ್ಕಳ ಆರೈಕೆ ಕೇಂದ್ರದ ಆವರಣದಲ್ಲಿ ಸರಳವಾಗಿ ಮಾಸ್ಕ್ಧಾರಣೆ ಸಾಮಾಜಿಕ ಅಂತರದಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ಆಸಕ್ತರು ಆಗಮಿಸಲು ಎರಡೂ ಸಂಸ್ಥೆಗಳ ಪದಾಧಿಕಾರಿಗಳು, ಸರ್ವ ಸದಸ್ಯರು ವಿನಂತಿಸಿದ್ದಾರೆ.