ಡಿ.27 ಕ್ಕೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಂಡಲ ಪೂಜೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಡಿ.24: ಇಲ್ಲಿನ ರಾಘವೇಂದ್ರ ಕಾಲೋನಿಯಲ್ಲಿನ ಶ್ರೀ ಶಬರಿ ಅಯ್ಯಪ್ಪ ಟ್ರಸ್ಟ್ ನಿಂದ ನಿರ್ಮಿಸಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಡಿ.27 ರಂದು 41 ನೇ ವರ್ಷದ “ಮಂಡಲ ಪೂಜೆ” ಹಮ್ಮಿಕೊಂಡಿದೆಂದು  ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷ ಜಯಪ್ರಕಾಶ್ ಜೆ‌.ಗುಪ್ತಾ ಹೇಳಿದ್ದಾರೆ.
ಅವರು ಇಂದು ದೇವಸ್ಥಾನದಲ್ಲಿ ಸುದ್ದಿಗೋಷ್ಟಿ ನಡೆಸಿ. ಅಂದು ಬೆಳಿಗ್ಗೆ ಧ್ವಜಾರೋಹಣ, ಅಭಿಷೇಕ, ಹೋಮ, ಬೆಳಿಗ್ಗೆ 10 ಕ್ಕೆ ಶಿವನಿಗೆ ರುದ್ರಾಭಿಷೇಕ,ಮಹಾ ಮಂಗಳಾರುತಿ, ಲಕ್ಷಾರ್ಚನೆ, ಭಜನೆ, ಪ್ರಸಾದ ವಿತರಣೆ ನಡೆಯಲಿದೆ.
ಸಂಜೆ 6 ಕ್ಕೆ ಸಂಗೀತ ಕಾರ್ಯಕ್ರಮ ಸೃಷ್ಟಿ ಸುರೇಶ್ ಅವರಿಂದ ನಡೆಯಲಿದೆ. ನಂತರ   ರಾತ್ರಿ 9.45 ಕ್ಕೆ ಪಡಿಪೂಜೆ ನಡೆಯಲಿದೆಂದು ತಿಳಿಸಿದರು.
ಇದಕ್ಕೂ ಮುನ್ನ ಸಂಜೆ 6.30 ಕ್ಕೆ ವೇದಿಕೆ ಕಾರ್ಯಕ್ರಮ ಇದ್ದು. ಸಚಿವ ಬಿ.ನಾಗೇಂದ್ರ, ನಗರ ಶಾಸಕ ಭರತ್ ರೆಡ್ಡಿ ಮೊದಲಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ವಿಶೇಷ:ಏಕ ಶಿಲೆಯಲ್ಲಿ ನಿರ್ಮಿಸಿರುವ ದೇವಸ್ಥಾನದ 53 ಅಡಿ ಎತ್ತರದ ದ್ವಜಸ್ಥಂಭ ಮತ್ತು 18 ಮೆಟ್ಟಲುಗಳು. ಅಲ್ಲದೆ ಅಯ್ಯಪ್ಪನ ವಿಗ್ರಹವನ್ನು ಪಂಚಲೋಹದಲ್ಲಿ ದೇವಸ್ಥಾನದಲ್ಲಿಯೇ ಶಿಲ್ಪಿಗಳಿಂದ ರಚಿಸಿದ್ದು. ಶಬರಿ ದೇವಸ್ಥಾನದ ಮಾದರಿಯಲ್ಲಿಯೇ ಈ ದೇವಸ್ಥಾನವಿದ್ದು. ಅಲ್ಲಿ ನಡೆಯುವ ಪೂಜೆಗಳು ಇಲ್ಲಿ ನಡೆಯಿತ್ತವೆ. ವಿಭಿನ್ನ ಎಂದರೆ ಇಲ್ಲಿ ಮಹಿಳೆಯರಿಗೂ ದರ್ಶನವಿದೆ.
ಸುದ್ದಿಗೋಷ್ಟಿಯಲ್ಲಿ ದೇವಸ್ಥಾನದ ಟ್ರಸ್ಟಿನ ಕಾರ್ಯದರ್ಶಿ ಮಂಜುನಾಥಸ್ವಾಮಿ, ಖಜಾಂಚಿ ಎ.ಮಹೇಶ್ ಕುಮಾರ್, ಗಾಯಕಿ ಸ್ಪಷ್ಟಿ, ಡಾ.ಸುರೇಶ್, ಉಪನ್ಯಾಸಕಿ ಸುನೀತ ಇದ್ದರು.