
ದಾವಣಗೆರೆ,ಡಿ.26: ವೀರಶೈವ ಲಿಂಗಾಯಿತ ಏಕೀಕರಣ ಪರಿಷತ್ ಹಾಗೂ ವಿಶ್ವ ಕಲ್ಯಾಣ ಪರಿಸರ ಗ್ರಾಹಕ ಸಾಂಸ್ಕೃತಿಕ ಪರಿಷತ್ ಆಶ್ರಯದಲ್ಲಿ 65ನೇ ಕನ್ನಡ ರಾಜ್ಯೋತ್ಸವ, ಹೊಸ ವರ್ಷ ಹೊಸ ಹರುಷ, ಸಾಧಕರಿಗೆ ಕೊರೊನಾ ವಾರಿರ್ಸ್ಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಮನ ಮಂಥನ ಕೃತಿ ಬಿಡುಗಡೆ, ಶರಣ ದಂಪತಿ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿಯನ್ನು ನಾಳೆ (ಡಿ.27ರಂದು) ಬೆಳಿಗ್ಗೆ 10.30ಕ್ಕೆ ನಗರದ ರೋಟರಿ ಬಾಲ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಪರಿಷತ್ ಅಧ್ಯಕ್ಷ ಬಳ್ಳಾರಿ ರೇವಣ್ಣ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಆವರಗೊಳ್ಳ ಪುರವರ್ಗ ಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ, ಕೂಡಲಸಂಗಮ ಪೀಠದ ಜಗದ್ಗುರು ಶ್ರೀಜಯಮೃತ್ಯುಂಜಯ ಸ್ವಾಮೀಜಿ ಕಾರ್ಯಕ್ರಮದ ದಿವ್ಯಾ ಸಾನಿಧ್ಯ ವಹಿಸುವರು. ಮೇಯರ್ ಅಜಯಕುಮಾರ್, ಪತ್ರಕರ್ತ ಶ್ರೀಧರ್ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಉಮಾ ರಮೇಶ್, ಗ್ರಾಮಾಂತರ ಬುದ್ಧಿ ಜೀವಿಗಳ ಬಳಗ ಬರ್ಯ ರಾಮ್ಕುಮಾರ್, ಸ್ವರ್ಣ ಭೂಮಿ ಸಂಸ್ಥಾಪಕ ಬಿ.ಶಿವಕುಮಾರ್. ಜ್ಯೋತಿಷಿ ಶಿವಕುಮಾರ್, ಪಿ.ಜಗನ್ನಾಥ್, ಇಂಧುಧರ ನಿಶಾನಿಮಠ್, ದಾಕ್ಷಾಯಣಮ್ಮ ಅಂದಪ್ಪ ಮತ್ತಿತರರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಪರಿಷತ್ ಕಾರ್ಯದರ್ಶಿ ಶಿವಕುಮಾರ್ ಶೆಟ್ಟರ್, ಎ.ಬಿ.ರುದ್ರಪ್ಪ, ಎನ್.ಜೆ.ಶಿವಕುಮಾರ್, ಟಿ.ಆರ್.ಪಂಕಜಾ, ಶ್ರೀಧರ ಪಾಟೀಲ್, ಎಸ್.ಎಚ್.ವಿನಯಕುಮಾರ್ ಹಾಜರಿದ್ದರು.