ಡಿ.26 ರಂದು ನಾಲ್ವರು ಸಾಧಕರಿಗೆ ಕರುನಾಡ ರತ್ನ ಪ್ರಶಸ್ತಿ

ಕಲಬುರಗಿ:ಡಿ.6: ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ)ದ ಸಂಘಟನೆ ವತಿಯಿಂದ ಇದೇ 26 ರಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಾಲ್ವರು ಸಾಧಕರಿಗೆ ಕರುನಾಡ ರತ್ನ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗುವುದು ಎಂದು ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ತಿಳಿಸಿದ್ದಾರೆ.
ಹಲವಾರು ವರ್ಷಗಳಿಂದ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಹೋರಾಟಗಾರ ಲಿಂಗರಾಜ ಸಿರಗಾಪೂರ(ಹೋರಾಟ ಕ್ಷೇತ್ರ), ಸಮಾಜಮುಖಿ ಕೆಲಸ ಮಾಡಿರುವ ಹಿರಿಯರಾದ ಡಾ.ಎ.ಎಸ್.ಭದ್ರಶೆಟ್ಟಿ (ಸಮಾಜ ಸೇವೆ) , ಪತ್ರಿಕಾ ರಂಗದಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತ ಜಯತೀರ್ಥ ಪಾಟೀಲ (ಮಾಧ್ಯಮ ಕ್ಷೇತ್ರ) , ಹಾಗೂ ಉದ್ಯಮಿದಾರರಾದ ಮಲ್ಲಿಕಾರ್ಜುನ ಮರತೂರಕರ್ (ಉದ್ಯಮ ಕ್ಷೇತ್ರ) ಇವರುಗಳಿಗೆ ಅಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಕರುನಾಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.