ಡಿ. 24 ರಿಂದ ಜಾತ್ರಾ ಕಾರ್ಯಕ್ರಮ

ಅಣ್ಣಿಗೇರಿ,ನ21: ಒಟ್ಟು ಏಳು ದಿನಗಳ ಜಾತ್ರಾ ಕಾರ್ಯಕ್ರಮದಲ್ಲಿ ಸುಮಾರು 40 ಶ್ರೀಗಳು ಸಾನಿಧ್ಯವನ್ನು ವಹಿಸಿ ಜ್ಞಾನ ಗಂಗೆಯನ್ನು ಹರಿಸಲಿದ್ದಾರೆ ಎಂದು ಶ್ರೀ ಶಿವಕುಮಾರ ಶ್ರೀಗಳು ಸಭೆ ಉದ್ದೇಶಿಸಿ ಮಾತನಾಡಿದರು.
ಇದೇ ಡಿಸೆಂಬರ್ 24 ರಿಂದ 30ರವರೆಗೆ ಒಟ್ಟು ಏಳು ದಿನಗಳ ಕಾಲ ಪಟ್ಟಣದ ದಾಸೋಹ ಮಠದ ಜಾತ್ರಾ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಠದ ಶ್ರೀಗಳು ತಿಳಿಸಿದರು. ಜಾತ್ರೆಯ ಸಕಲ ಕಾರ್ಯಕ್ರಮಗಳಿಗೆ ಪಟ್ಟಣದ ಸಾರ್ವಜನಿಕರು ಹಾಗೂ ತಾಲೂಕಿನ ಸಾರ್ವಜನಿಕರು ಸಹಕರಿಸಿ ಜಾತ್ರೆಯ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.

ಮಠದ ಪ್ರಧಾನ ಕಾರ್ಯದರ್ಶಿಗಳಾದ ಷಣ್ಮುಖ ಗುರಿಕಾರ ಅವರು ಮಾತನಾಡಿ ಜಾತ್ರೆಯ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಹಲವಾರು ಸಮಿತಿಗಳನ್ನು ರಚನೆ ಮಾಡಿ ಕಾರ್ಯಕ್ರಮಗಳ ಯಶಸ್ವಿಯಾಗಿ ಸಾಗುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕೆಂದು ಸಮಿತಿಯ ಅಧ್ಯಕ್ಷರಿಗೆ ಮತ್ತು ಕಾರ್ಯದರ್ಶಿಗಳಿಗೆ ವಿನಂತಿಸಿದರು.
ಕಳೆದ ಎರಡು ವರ್ಷಗಳಿಂದ ಕೊರೋನಾದ ಕರಿ ನೆರಳಿನಿಂದ ಸರ್ಕಾರದ ನಿಯಮಗಳಂತೆ ಸರಳವಾಗಿ ಜಾತ್ರೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು ಎಂದರು.
ಜಾತ್ರಾ ಮಹೋತ್ಸವದ ಮುಖ್ಯ ಸಮಿತಿಯ ಅಧ್ಯಕ್ಷರಾಗಿ ಮಹೇಶ್ ಅಂಗಡಿ, ಉಪಾಧ್ಯಕ್ಷರಾಗಿ ಅರ್ಜುನ್ ಕಲಾಲ್, ಡಾ. ಶಂಕರ್ ಜೋಶಿ, ಕಾರ್ಯದರ್ಶಿಗಳಾಗಿ ನಿಂಗಪ್ಪ ಬಡ್ಡಪ್ಪನವರ್, ಶಿವಾನಂದ್ ಹಾಳದೊಟರರವರುಗಳನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಮಠದ ನಿರಂತರ ಸೇವಾ ಟ್ರಸ್ಟ್ ಎಲ್ಲ ಪದಾಧಿಕಾರಿಗಳು ಹಾಗೂ ಅಣ್ಣಿಗೇರಿ ಹಾಗೂ ಸುತ್ತು ಮುತ್ತಲಿನ ಊರಿನ ಎಲ್ಲ ಸದ್ಭಕ್ತರು ಉಪಸ್ಥಿತರಿದ್ದರು.