ಡಿ. 2 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ,ನ.30:ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಕಾರ್ಯ ಮತ್ತು ಪಾಲನೆ ವಿಭಾಗ-2ರ ಪ್ರಸ್ತುತ 110/33/11 ಕೆ.ವಿ. ಮಂದೆವಾಲ ಮಾರ್ಗದಲ್ಲಿ ತ್ವರಿತ ಕಾಮಗಾರಿ ಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಜೇವರ್ಗಿ ಉಪವಿಭಾಗದ ಮಂದೆವಾಲ್ ವಿತರಣಾ ಕೇಂದ್ರದ ವ್ಯಾಪ್ತಿಯ ಕೆಳಕಂಡ ಗ್ರಾಮಗಳಲ್ಲಿ 2021ರ ಡಿಸೆಂಬರ್ 2ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವÀರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಜೇವರ್ಗಿ ಉಪವಿಭಾಗದ ಮಂದೆವಾಲ್ ವಿದ್ಯುತ್ ವಿತರಣಾ ಕೇಂದ್ರ: ಜೇವರ್ಗಿ ತಾಲೂಕಿನ ಜೇರಟಗಿ, ಮಂದೆವಾಲ, ಕಲೂರ. ಕೆ, ನೆದಲಗಿ, ನೆಲೋಗಿ, ಹಿಪ್ಪರಗಾ ಹಾಗೂ ಸೋನ ಗ್ರಾಮ ಪಂಚಾಯತಿಯ ಎಲ್ಲಾ ಗ್ರಾಮಗಳು.