ಡಿ.2 ರಂದು ಅಧ್ಯಕ್ಷರ ಆಯ್ಕೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಡಿ.01: ಮಾದಿಗ ಸಮಾಜದ ತಾಲೂಕು ಅಧ್ಯಕ್ಷರನ್ನು ಆಯ್ಕೆ ಮಾಡಲು ಡಿಸೆಂಬರ್ 2ರಂದು ದಿನಾಂಕ ನಿಗದಿ ಮಾಡಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ ) ಜಿಲ್ಲಾ ಸಂಚಾಲಕರಾದ ಸವಣೂರು ಯಲ್ಲಪ್ಪ ಹೇಳಿದರು,
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುದುವಾರ ತಾಲೂಕು ಮಾದಿಗ ಸಮಾಜದ ಯುವ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾದಿಗ ಸಮಾಜ ಸಂಘಟನೆ ಮತ್ತು ಸಮಾಜದ ಅಭಿವೃದ್ಧಿಗಾಗಿ ಸಮರ್ಥ ಅಧ್ಯಕ್ಷರನ್ನು ಪಟ್ಟಣದ ಬಾಬು ಜಗಜೀವನ್ ರಾಮ್ ಭವನದಲ್ಲಿ ನಡೆಯಲಿದೆ ಸಮಾಜದ ಹಿರಿಯರು ಹಾಗೂ ಯುವಕರು ಸೇರಿ ನಾನಾ ಸಂಘಟನೆಯ ಮುಖಂಡರು ಆಗಮಿಸಬೇಕೆಂದು ಮನವಿ ಮಾಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ )ತಾಲೂಕು ಸಂಚಾಲಕರಾದ ಕೆ ಸುಭಾಷ್.
ಶೃಂಗಾರ ತೋಟ ನಿಂಗರಾಜ್  ಹಾಗೂ ರವಿಕುಮಾರ್ ಮಾತನಾಡಿದರು
ಈ ಸಂದರ್ಭದಲ್ಲಿ  ಕಬ್ಬಳ್ಳಿ ಮೈಲಪ್ಪ. ಬಾಪೂಜಿನಗರದ ಮುಖಂಡರಾದ ಬಿ ಮಹೇಂದ್ರಕುಮಾರ್. ಶೃಂಗಾರ ತೋಟ ಮಂಜುನಾಥ್. ಹನುಮಂತ.ಪ್ರಕಾಶ್. ಮರಿಯಾ,  ನವೀನ್ ಕುಮಾರ್ ಪೂಜಾರ್. ಮುಂತಾದವರು ಉಪಸ್ಥಿತರಿದ್ದರು.

One attachment • Scanned by Gmail