ಡಿ.2ರಂದು ಡಾ.ಭೀಮಣ್ಣ ಖಂಡ್ರೆ ಉನ್ಮಶತಮಾನೋತ್ಸವ, ಅಭಿನಂದನಾ ಗ್ರಂಥ ಬಿಡುಗಡೆ

ಚಿಂಚೋಳಿ,ನ.16- ಬರಲಿರುವ ಡಿಸೆಂಬರ್ 2ರಂದು ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಗೌರವಾಧ್ಯಕ್ಷರಾದ ಡಾ. ಭೀಮಣ್ಣ ಖಂಡ್ರೆ ಅವರ ಜನ್ಮಶತಮಾನೋತ್ಸವ ಮತ್ತು ಅಭಿನಂದನಾ ಗ್ರಂಥ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಜಿಲ್ಲಾ ಅಧ್ಯಕ್ಷರಾದ ದೀಪಕನಾಗ ಪುಣ್ಯ ಶೆಟ್ಟಿ, ಅವರು ತಿಳಿಸಿದ್ದಾರೆ.
ಪಟ್ಟಣದ ಪೆÇೀಲಕಪಳ್ಳಿ ಪ್ರವಾಸಿ ಮಂದಿರದಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ಸುತ್ತೂರು ಸಂಸ್ಥಾನದ ಶಿವರಾತ್ರಿ ದೇಶಿ ಮಹಾಸ್ವಾಮಿಗಳು ಸೇರಿದಂತೆ ನಾಡಿನ ಅನೇಕ ಮಠಾಧೀಶರು ಕಲ್ಯಾಣ ಕರ್ನಾಟಕದ ಬರುವ ಎಲ್ಲಾ ಸ್ವಾಮೀಜಿಗಳು ಹಾಗೂ ಕಾಂಗ್ರೆಸ್ ಪಕ್ಷದ ಎಐಸಿಸಿ ಅಧ್ಯಕ್ಷರಾದ ಡಾ ಮಲ್ಲಿಕಾರ್ಜುನ ಖರ್ಗೆ, ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಸೇರಿದಂತೆ ಅನೇಕ ಸಚಿವರು ಮತ್ತು ಶಾಸಕರು ವಿಪಕ್ಷದ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಚಿಂಚೋಳಿ ತಾಲೂಕಲ್ಲಿಂದ ಕೂಡ 5,000 ಹೆಚ್ಚು ಸಮಾಜದ ಬಾಂಧವರು ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ದೀಪಕನಾಗ ಪುಣ್ಯ ಶೆಟ್ಟಿ, ಅವರು ಹೇಳಿದರು ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಅಧ್ಯಕ್ಷರಾದ ಚಿತ್ರಶೇಖರ್ ಪಾಟೀಲ್, ವೀರಶೈವ ಸಮಾಜದ ಅಧ್ಯಕ್ಷರಾದ ಸಂಜೀವ ಕುಮಾರ್ ಪಾಟೀಲ್, ಬಸವ ಸೇವಾ ಸಮಿತಿ ಅಧ್ಯಕ್ಷರಾದ ನೀಲಕಂಠ ಸೀಳಿನ,ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಯುವ ಅಧ್ಯಕ್ಷರಾದ ನಾಗರಾಜ ಮಲಕೂಡ, ಸಮಾಜದ ಮುಖಂಡರಾದ ಡಾ ಜ್ಯೋತಿರ್ಲಿನ್ ಸೂಗೂರು, ವೀರಶೆಟ್ಟಿ ಪಾಟೀಲ್, ಸೂರ್ಯಕಾಂತ್ ಹುಲಿ, ವಿಜಯ ಕುಮಾರ ರೊಟ್ಟಿ, ಶಿವ ಸ್ವಾಮಿ, ಸಂಜುಪಾಟೀಲ್ ಯoಪಳ್ಳಿ, ಶರಣು ಪಪ್ಪ, ಇದ್ದರು