ಡಿ.19 ರಂದು ಒಟ್ಟು 4250 ನಾಮಪತ್ರಗಳು ಸಲ್ಲಿಕೆ

ವಿಜಯಪುರ ಡಿ.21 : ಜಿಲ್ಲೆಯಲ್ಲಿ ಎರಡನೆ ಹಂತದ ಗ್ರಾಮಪಂಚಾಯತ ಸಾರ್ವತ್ರಿಕ ಚುನಾವಣೆಗೆ ಅಂತಿಮವಾಗಿ ಡಿ. 19 ರಂದು ವಿವಿಧ ಗ್ರಾಮಪಂಚಾಯತಿಗಳಲ್ಲಿ ಒಟ್ಟು 4250 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ತಿಳಿಸಿದ್ದಾರೆ.

ಇಂಡಿ ತಾಲೂಕಿನ ಗ್ರಾಮ ಪಂಚಾಯತಗಳಿಗೆ -1761, ಚಡಚಣ ತಾಲೂಕಿನ ಗ್ರಾಮ ಪಂಚಾಯತಗಳಿಗೆ – 787, ಸಿಂದಗಿ ತಾಲೂಕಿನ ಗ್ರಾಮ ಪಂಚಾಯತಗಳಿಗೆ – 1070, ದೇ.ಹಿಪ್ಪರಗಿ ತಾಲೂಕಿನ ಗ್ರಾಮ ಪಂಚಾಯತಗಳಿಗೆ – 677 ಹೀಗೆ ಒಟ್ಟು 4250 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.