ಡಿ.18 ರಂದು ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಮಾವೇಶ

ಕಲಬುರಗಿ;ನ.20: ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಮಾವೇಶ ಡಿ. 18 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಹ ಸಂಯೋಜಕ ಜಯತೀರ್ಥ ಕಟ್ಟಿ ಹೇಳಿದರು.
ಕಲಬುರ್ಗಿ ನಗರದ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ನಡೆದ ಸಮಾವೇಶದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದ ಎಲ್ಲ ಜಿಲ್ಲೆಗಳ ಪ್ರಕೋಷ್ಠಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಕಲಬುರ್ಗಿ ನಗರ ಮತ್ತು ಗ್ರಾಮಾಂತರ ಎರಡು
ಜಿಲ್ಲೆಯ 24 ಪ್ರಕೋಷ್ಠಗಳ 3,000 ಪದಾಧಿಕಾರಿಗಳು ಹಾಗೂ ಸದಸ್ಯರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ವೈದ್ಯಕೀಯ ಪ್ರಕೋಷ್ಠಗಳ ಜಿಲ್ಲಾ ಸಂಯೋಜಕಿ ಡಾ.ಸುಧಾ ಹಾಲಕಾಯಿ ಹೇಳಿದರು.
ರಾಜ್ಯ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ.ಮಹೇಶ ನಾಲವಾಡ, ಸದಸ್ಯೆ ಡಾ.ಸುಧಾ ಹಲ್ಕೈ, ಅಸಂಘಟಿತ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ವೀರೇಶ ಸಂಗಲಾದ್, ಡಾ.ಆನಂದ ಕ್ರಿಶಾಲ್, ರಾಜ್ಯ ಪ್ರಕೋಷ್ಠಗಳ ಸದಸ್ಯರಾದ ವೀರಣ್ಣ ಕಾರಬಾರಿ, ಲಿಂಗರಾಜ ಬಿರೆದಾರ, ಅಶೋಕ್ ಬಗಲಿ , ಬಾಬುರಾವ್ ಹಾಗರಗುಂಡಗಿ ಇದ್ದರು.
ಜಿಲ್ಲೆಯ ವಿವಿಧ ಪ್ರಕೋಷ್ಠಗಳ ಸಂಚಾಲಕರು ಹಾಗೂ ಸಹ ಸಂಚಾಲಕರು ಸಭೆಯಲ್ಲಿ ಪಾಲ್ಗೊಂಡಿದ್ದರು.