ಡಿ. 18ಕ್ಕೆ ಬೃಹತ್ ಲೋಕ್ ಅದಾಲತ್

ಜಗಳೂರು.ನ.೨೬; ಕಲಹ ಹಾಗೂ ವ್ಯಾಜ್ಯಮುಕ್ತ ಶಾಂತಿಯುತ ಸಮಾಜ ನಿರ್ಮಾಣದ ದೃಷ್ಟಿಯಿಂದ ಸುಪ್ರೀಂಕೋರ್ಟ್ ಆಶಯದಂತೆ ದೇಶದೆಲ್ಲೆಡೆ ಆಗಾಗ್ಗೆ ಬೃಹತ್ ಲೋಕ್ ಅದಾಲತ್ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಇಲ್ಲಿನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಜಿ. ತಿಮ್ಮಯ್ಯ ಹೇಳಿದರು.ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ಈಚೆಗೆ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.ಸಾರ್ವಜನಿಕರಿಗೆ ಇತ್ತೀಚೆಗೆ ಕಾನೂನಿನ ಬಗ್ಗೆ ಅರಿವು ಮೂಡುತ್ತಿದೆ. ಕಾನೂನುಸೇವಾ ಪ್ರಾಧಿಕಾರದ ವತಿಯಿಂದ ತಾಲ್ಲೂಕಿನ ಪ್ರತಿ ಹಳ್ಳಿಹಳ್ಳಿಯಲ್ಲಿ ವಕೀಲರು ಹಾಗೂ ಕಾನೂನುಸೇವಾ ಸಮಿತಿಯಿಂದ ವ್ಯಾಪಕವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಲಾಗಿದೆ. ಜನಸಾಮಾನ್ಯರಿಗೆ ಕಾನೂನಿನ ಬಗ್ಗೆ ಹೆಚ್ಚುಹೆಚ್ಚು ಅರಿವು ಮೂಡಿದಂತೆಲ್ಲಾ ಅನಗತ್ಯವಾಗಿ ವ್ಯಾಜ್ಯಗಳಿಗಾಗಿ ನ್ಯಾಯಾಲಯಕ್ಕೆ ಅಲೆದಾಡುವುದನ್ನು ಇಚ್ಚಿಸದೆ ರಾಜೀಸಂಧಾನಕ್ಕೆ ಆದ್ಯತೆ ನೀಡುತ್ತಿದ್ದಾರೆ. ಕಳೆದ ಹಲವು ಲೋಕ್ ಅದಾಲತ್ ಕಾರ್ಯಕ್ರಮಗಳಲ್ಲಿ ಇದು ದೃಢಪಟ್ಟಿದೆ ಎಂದರು.ಈ ಹಿನ್ನೆಲೆಯಲ್ಲಿ ಡಿ. 18 ರಂದು ಬೃಹತ್ ಲೋಕ್ ಅದಾಲತ್ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ.ನ್ಯಾಯಾಲಯದಲ್ಲಿ ಇತ್ಯರ್ಥದ ಹಂತದಲ್ಲಿರುವ ಪ್ರಕರಣಗಳು ಮಾತ್ರವ್ಲಲದೆ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜೀಸಂಧಾನದ ಮೂಲಕ ಪರಿಹರಿಸಿಕೊಂಡಿಲ್ಲಿ ಪಕ್ಷಗಾರರಿಗೆ ತಮ್ಮ ಅಮೂಲ್ಯ ಸಮಯ , ಹಣ ಉಳಿತಾಯವಾಗುತ್ತದೆ. ವಕೀಲರು, ಪೊಲೀಸರು ಹಾಗೂ ಕಾನೂನು ಸೇವಾ ಸಮತಿಯ ಪ್ರಯತ್ನದಿಂದಾಗಿ ಲೋಕ್ ಅದಾಲತ್ ಗಳಿಗೆ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ದಾಖಲೆಯ ಸಂಖ್ಯೆಯ ಪ್ರಕಣಗಳು ಇತ್ಯರ್ಥವಾಗಿವೆ ಎಂದು ನ್ಯಾಯಾಧೀಶರು ಹೇಳಿದರು.ಕಾನೂನಿನ ಕುರಿತ ಅರಿವು ಸಹ ಇಂತಹ ಕಾರ್ಯಕ್ರಮಗಳ ಯಶಸ್ಸಿಗೆ ಕಾರಣವಾಗುತ್ತವೆ.  ಪಕ್ಷಗಾರರು ಪರಸ್ಪರ ರಾಜೀಸಂಧಾನದ ಮೂಲಕ ನೆಮ್ಮದಿ ಮತ್ತು ಸುಖಮಯ ಜೀವನ ನಡೆಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಬ್ಯಾಂಕ್ ಗಳಲ್ಲಿ ಸಾಲ ಪಡೆದಿರುವುವವರು, ಚೆಕ್ ಬೌನ್ಸ್ ಪ್ರಕರಣಗಳ ಪಕ್ಷಗಾರರು ಹಾಗೂ ರಾಜೀಯಾಗಬಲ್ಲ ವಿವಿಧ ಅಪರಾಧ ಪ್ರಕರಣಗಳು ಮತ್ತು ಸಿವಿಲ್ ಸ್ವರೂಪದ ಪ್ರಕರಣಗಳ ಪಕ್ಷಗಾರರು ಲೋಕ್ ಅದಾಲತ್ ನ್ನು ಸದುಪಯೋಪಗಪಡಿಸಿಕೊಳ್ಳಬೇಕು ಎಂದು ನ್ಯಾಯಾಧೀಶರು ಸಲಹೆ ನೀಡಿದ್ದಾರೆ.Attachments area