ಡಿ.14 ದೆಹಲಿ ಚಲೋ ಮಹಾ ಸಮಾವೇಶ

ಕೋಲಾರ, ಡಿ.೯:ಎಸ್ಸಿ ಒಳಮೀಸಲಾತಿ ವರ್ಗೀಕರಣಕ್ಕೆ ಆಗ್ರಹಿಸಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಡಿಸೆಂಬರ್ ೧೪ ರಂದು ಹಲೋ ಮಾದಿಗ ಚಲೋ ದೆಹಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ದಂಡೋರ ಸಂಸ್ಥಾಪಕರು ಹಾಗೂ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗರವರ ನೇತೃತ್ವದಲ್ಲಿ ಮಾದಿಗ ವಿದ್ಯಾರ್ಥಿಗಳ ಮಹಾ ಸಭೆ ಆಯೋಜಿಸಲಾಗಿದೆ.
ದೇಶದ ೧೮ ರಾಜ್ಯಗಳಲ್ಲಿ ಮಾದಿಗ ದಂಡೋರದ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಒಳಮೀಸಲಾತಿ ಜಾರಿಗೆ ಮಾಡಬೇಕೆಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಕದರಿಪುರ ಮಂಜುನಾಥ್, ಕೋಲಾರ ತಾಲೂಕು ಅಧ್ಯಕ್ಷ ಹಾಲೇರಿ ಮುನಿರಾಜು, ಮಾದಿಗ ದಂಡೋರ ವಿದ್ಯಾರ್ಥಿಗಳಾದ ತಿರುಮಲ ಮೂರ್ತಿ, ವರುಣ್, ಗುರುಮೂರ್ತಿ, ಯಶ್ವಂತ್, ಕುಮಾರ್, ಗಣೇಶ್ ಮುಂತಾದವರು ಭಾಗವಹಿಸಿದ್ದರು.