ಡಿ.12ರೊಳಗೆ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕು:ಯತ್ನಾಳ

ಇಂಡಿ: ನ.16: ಆರ್ಥಿಕವಾಗಿ,ಸಾಮಾಜಿಕ ,ಶೈಕ್ಷಣಿಕವಾಗಿ 2 ಎ ಮೀಸಲಾತಿ ಬೇಡಲಾಗುತ್ತಿದೆ ವಿನಹ: ರಾಜಕೀಯವಾಗಿ ಕೇಳತಾ ಇಲ್ಲ, ನಮ್ಮ ಬೋಮ್ಮಾಯಿ ಸಾಹೇಬ್ರು ಎಲ್ಲೋ ನಮ್ಮ ಮುಂದೇ ಮಾಡುತ್ತೇನೆ ಎಂದು ಹೇಳಿ ಹಿಂದೇ ಮತ್ತೇನು ಹೇಳುತ್ತಾರೆ ಗೋತ್ತಿಲ್ಲ, ಸುಮ್ಮನ್ನೆ ಜೊಕ್ಕೊಂಡು ಹೋಗಬೇಡಿ ಇನ್ನು ತಡೆಯುವ ಶಕ್ತಿ ಯಾರಿಂದಲೂ ಅಸಾಧ್ಯೆ ಡಿ,12 ರ ಒಳಗಾಗಿ ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಕೊಡಲೇಬೇಕು ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿದರು.