ಡಿ. 12ರಂದು ಕ್ರೀಡಾದಿನ – ಸನ್ಮಾನ


ಹುಬ್ಬಳ್ಳಿ, ಡಿ 7: ಭಾರತವನ್ನು ಪ್ರತಿನಿಧಿಸಿದ ಧಾರವಾಡ ಜಿಲ್ಲೆಯ ಕ್ರೀಡಾಪಟುಗಳನ್ನು ಸನ್ಮಾನಿಸುವ ಉದ್ದೇಶದಿಂದ ಟೈ ಹುಬ್ಬಳ್ಳಿ ವತಿಯಿಂದ ಡಿಸೆಂಬರ್ 12 ರಂದು ಗೋಕುಲ್ ರಸ್ತೆಯ ಕಾಟನ್ ಕಂಟ್ರಿ ಕ್ಲಬ್‍ನಲ್ಲಿ ಟೈ ಹುಬ್ಬಳ್ಳಿ ಕ್ರೀಡಾ ದಿನವನ್ನಾಗಿ ಆಚರಿಸಲಾಗುವುದು ಎಂದು ಟೈ ಹುಬ್ಬಳ್ಳಿ ಅಧ್ಯಕ್ಷ ವಿಜಯ ಸೈಗಲ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟೈ ಹುಬ್ಬಳ್ಳಿ ವತಿಯಿಂದ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಅದರ ಮುಂಬಾಗವಾಗಿ ಇದೀಗ ಕ್ರೀಡೆಯಲ್ಲಿ ದೇಶವನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವ ಕ್ರೀಡಾಪಟುಗಳನ್ನು ಗೌರವಿಸುವುದಾಗಿದೆ ಎಂದರು.
ಅದಕ್ಕಾಗಿ ಜಿಲ್ಲೆಯ ವಿವಿಧ ಕ್ರೀಡೆಗಳಲ್ಲಿ ಸಾಧನೆಗೈದಿರುವ ಆಟಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಡಿಸೆಂಬರ್ 10 ರೊಳಗಾಗಿ ಇಮೇಲ್ iಟಿಜಿo@hubಟi.ಣie oಡಿg ಅಥವಾ ಮೊಬೈಲ್ ಸಂಖ್ಯೆ – 7090782693 ಗೆ ಕರೆ ಮಾಡಿ ನೊಂದಾಯಿಸಿಕೊಳ್ಳಬೇಕೆಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಶಾಲ ನಾಡಗೌಡ, ಪ್ರಸನ್ ಕುಲಕರ್ಣಿ, ರಾಜು ದೊಡ್ಡಮನಿ ಇದ್ದರು.