ಡಿ. 10, ವಿಧಾನ ಪರಿಷತ್ ಚುನಾವಣೆ

ಬೆಂಗಳೂರು,ನ.೯- ರಾಜ್ಯ ವಿಧಾನ ಪರಿಷತ್‌ನ ೨೫ ಸ್ಥಾನಗಳಿಗೆ ಡಿ. ೧೦ ರಂದು ಚುನಾವಣೆ ನಡೆಯಲಿದೆ. ಚುನಾವಣಾ ಫಲಿತಾಂಶ ಡಿ. ೧೪ ರಂದು ಪ್ರಕಟವಾಗಲಿದೆ.
ಸ್ಥಳೀಯ ಸಂಸ್ಥೆಗಳಿಂದ ಪರಿಷತ್‌ಗೆ ಆಯ್ಕೆಯಾಗಿರುವ ೨೫ ಸ್ಥಾನಗಳಿಗೆ ಡಿ. ೧೦ ರಂದು ಚುನಾವಣಾ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ನಿಗದಿ ಮಾಡಿದೆ.
ಈ ಚುನಾವಣೆಗಳಿಗೆ ನ. ೧೬ ರಂದು ಅಧಿಸೂಚನೆ ಹೊರ ಬೀಳಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಕೆಗೆ ನ. ೨೩ ಕಡೆಯ ದಿನವಾಗಿದ್ದು, ನಾಮಪತ್ರಗಳ ಪರಿಶೀಲನೆ ನ. ೨೪ ರಂದು ನಡೆಯಲಿದ್ದು, ನಾಮಪತ್ರ ವಾಪಸ್ಸಾತಿಗೆ ನ. ೨೬ ಕೊನೆಯ ದಿನವಾಗಿದೆ.
ಈ ಎಲ್ಲ ೨೫ ಕ್ಷೇತ್ರಗಳಿಗೆ ಡಿ. ೧೦ ರಂದು ಬೆಳಿಗ್ಗೆ ೮ ರಿಂದ ಸಂಜೆ ೪ರವರೆಗೆ ಮತದಾನ ನಡೆಯಲಿದೆ. ಡಿ. ೧೪ ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.
ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ೨೫ ಸದಸ್ಯರ ಅವಧಿ ಡಿಸೆಂಬರ್ ಕೊನೆಗೆ ಅಂತ್ಯವಾಗಲಿದ್ದು, ಅವಧಿಗೂ ಮುನ್ನವೇ ನೂತನ ಸದಸ್ಯರ ಆಯ್ಕೆಗೆ ಚುನಾವಣಾ ಆಯೋಗ ಡಿ. ೧೦ ರಂದು ಚುನಾವಣೆಯನ್ನು ನಿಗದಿ ಮಾಡಿ ಆದೇಶ ಹೊರಡಿಸಿದೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ವಿಜಯ್‌ಸಿಂಗ್, ಬಿ.ಜಿ. ಪಾಟೀಲ್, ಎಸ್.ಆರ್. ಪಾಟೀಲ್, ಸುನಿಲ್‌ಗೌಡ ಪಾಟೀಲ್, iಹಂತೇಶ ಕವತಗಿ ಮಠ, ವಿವೇಕ್‌ರಾವ್ ಪಾಟೀಲ್, ಲಕ್ಷ್ಮಣ್ ಗೋಟ್ನೇಕರ್, ಪ್ರದೀಪ್ ಶೆಟ್ಟರ್, ಶ್ರೀನಿವಾಸ ಮಾನೆ, ಬಸವರಾಜ ಪಾಟೀಲ್ ಇಟಗಿ, ಕೆ.ಸಿ. ಕೊಂಡಯ್ಯ, ರಘು ಆಚಾರ್, ಆರ್. ಪ್ರಸನ್ನಕುಮಾರ್, ಕೆ. ಪ್ರತಾಪ್‌ಚಂದ್ರ ಶೆಟ್ಟಿ, ಎಂ.ಕೆ ಪ್ರಾಣೇಶ್, ಎಂ.ಎ ಗೋಪಾಲಸ್ವಾಮಿ, ಕಾಂತರಾಜ್, ಅಪ್ಪಾಜಿ ಗೌಡ, ಎಂ. ನಾರಾಯಣಸ್ವಾಮಿ, ಎಸ್. ರವಿ, ಸಿ.ಆರ್ ಮನೋಹರ್, ಸುನಿಲ್ ಸುಬ್ರಮಣಿ, ಆರ್. ಧiಸೇನಾ, ಸಂದೇಶ್ ನಾಗರಾಜ್ ಇವರುಗಳ ಅವಧಿ ಮುಗಿಯಲಿದ್ದು, ಈ ಸ್ಥಾನಗಳಿಗೆ ಈಗ ಚುನಾವಣೆ ನಿಗದಿಯಾಗಿದೆ.

  • ವಿಧಾನ ಪರಿಷತ್‌ನ ೨೫ ಸ್ಥಾನಗಳಿಗೆ ಡಿ. ೧೦ ರಂದು ಚುನಾವಣೆ
  • ನ. ೧೬ ರಿಂದ ನಾಮಪತ್ರ ಸಲ್ಲಿಕೆ ಆರಂಭ.
  • ನ. ೨೬ ನಾಮಪತ್ರ ವಾಪಸ್ಸಾತಿಗೆ ಕಡೆಯ ದಿನ.
  • ಡಿ. ೧೪ ರಂದು ಮತ ಎಣಿಕೆ ಫಲಿತಾಂಶ ಪ್ರಕಟ.