ಡಿ. ೭ ರಿಂದ ೨೯ರವರೆಗೆ ಸಂಸತ್ ಕಲಾಪ

ನವದೆಹಲಿ,ನ.೧೯- ಡಿ. ೭ ರಿಂದ ೨೯ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಕುರಿತು ಕೇಂದ್ರ ಸಂಸದೀಯ ವ್ಯವಹಾರನಗಳ ಸಚಿವ ಪ್ರಲ್ಹಾದ್‌ಜೋಷಿ ಮಾಹಿತಿ ನೀಡಿದ್ದು, ೧೭ ದಿನಗಳ ಕಾಲ ಕಲಾಪ ನಡೆಯಲಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ೨೩ ದಿನಗಳ ಅವಧಿಯಲ್ಲಿ ೧೭ ದಿನಗಳ ಕಾಲ ಕಲಾಪ ನಡೆಯಲಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕು ಇಳಿಕೆಯಾಗಿರುವ ಹಿನ್ನೆಲೆಂiiಲ್ಲಿ ಲೋಕಸಭೆ ಮತ್ತು ರಾಜ್ಯಸಭಾ ಸಚಿವಾಲಯದ ಸದಸ್ಯರು ಮತ್ತು ಸಿಬ್ಬಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಹೀಗಾಗಿ, ಯಾವುದೇ ಪ್ರಮುಕ ಕೋವಿಡ್ ನಿರ್ಬಂಧಗಳಿಲ್ಲದೆ ಅಧಿವೇಶನ ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯಸಭೆಯ ಸಭಾಪತಿಯಾಗಿರುವ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅಧಿಕಾರ ವಹಿಸಿಕೊಂಡ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಬೇಕಾದ ಮಸೂದೆಗಳ ಪಟ್ಟಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ. ಇತ್ತೀಚೆಗೆ ನಿಧನರಾದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂಸಿಂಗ್ ಯಾದವ್ ಸೇರಿದಂತೆ ಹಾಲಿ ಸದಸ್ಯರ ನಿಧನದ ಗೌರವಾರ್ಥ ಅಧಿವೇಶನದ ಮೊದಲ ದಿನದ ಕಲಾಪ ಮುಂದೂಡುವ ನಿರೀಕ್ಷೆ ಇದೆ.